Ad Widget

“ಹಾಡಿನೊಂದಿಗೆ ತಿಳಿಸುವ ಜ್ಞಾನ ಮಕ್ಕಳ ಭವಿಷ್ಯದ ಉನ್ನತಿಗೆ ಸೋಪಾನ” –  ಲಕ್ಷ್ಮೀಶ ಗಬ್ಲಡ್ಕ

ಕಲಾವಿದ ಮಣಿ ನಾಲ್ಕೂರು ಅವರಿಗೆ ಸನ್ಮಾನ

ಸುಬ್ರಹ್ಮಣ್ಯ : “ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಬದುಕಿನ ವಿದ್ಯೆ ಅತ್ಯವಶ್ಯಕ. ಜನಪದ ಹಾಡುಗಳೊಂದಿಗೆ ಜೀವನದ ಸಾರವನ್ನು ಯುವ ಜನಾಂಗಕ್ಕೆ ನೀಡುವುದರಿಂದ ಅವರಿಗೆ ಬದುಕಿನ ಅರ್ಥ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಜೀವನ ಕಟ್ಟಿಕೊಳ್ಳಲು ಬೇಕಾದ ವಿಚಾರಗಳನ್ನು ಹಾಡಿನ ಮೂಲಕ ತಿಳಿಸಿದಾಗ ವಿದ್ಯಾರ್ಥಿಗಳ ಮನಸಿನಲ್ಲಿ ಅವುಗಳು ಅಚ್ಚಳಿಯದೆ ನಿಲ್ಲುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಬದುಕಿಗೆ ತಿರುವನ್ನು ಒದಗಿಸುತ್ತದೆ” ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಎಸ್‌.ಎಸ್‌.ಪಿ.ಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶನಿವಾರ ನಡೆದ “ಜನಪದದೊಂದಿಗೆ ಜೀವನ ಮೌಲ್ಯ ಸಂಗೀತ ಕಾರ್ಯಾಗಾರ”ದಲ್ಲಿ ಅವರು ಮಾತನಾಡಿದರು. “ಹಾಡಿನೊಂದಿಗೆ ತಿಳಿಸುವ ಜೀವನ ಕೌಶಲ್ಯದ ಜ್ಞಾನವು ಮಕ್ಕಳ ಭವಿಷ್ಯದ ಉನ್ನತಿಗೆ ಸೋಪಾನವಾಗುತ್ತದೆ” ಎಂದರು.
ಅರ್ಥಪೂರ್ಣ ಕಾರ್ಯಕ್ರಮ: ಕಲಾವಿದರಾದ ಮಣಿ ನಾಲ್ಕೂರು ರವರು ಸುಮಾರು 1 ತಾಸಿನ ಕಾಲ ಜನಪದ ಹಾಡಿನೊಂದಿಗೆ ಬದುಕಿನ ಸಾರವನ್ನು ಮಕ್ಕಳಿಗೆ ತಿಳಿಸಿದರು. ಭವಿಷ್ಯದ ಬದುಕಿನ ಬಗ್ಗೆ, ಪರಿಸರ ಸಂರಕ್ಷಣೆ ಬಗ್ಗೆ, ಗುರಿ ಸಾಧನೆ, ಸಾಧನೆಯ ಕನಸಿನ ನನಸಿನ ಬಗ್ಗೆ ಹಾಡಿನ ಮೂಲಕ ಮಕ್ಕಳಿಗೆ ಪರಿಪೂರ್ಣವಾಗಿ ವಿವರಿಸಿದರು. ಅಲ್ಲದೆ ಸಂಗೀತದೊಂದಿಗೆ ಜೀವನ ಕೌಶಲ್ಯವನ್ನು ಮಕ್ಕಳಿಗೆ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದರಾದ ಮಣಿ ನಾಲ್ಕೂರು, ಸಾಂಸ್ಕೃತಿಕ ಸಂಘದ ಸಂಚಾಲಕರಾದ ರೇಖಾರಾಣಿ ಸೋಮಶೇಖರ್, ಪ್ರೌಢಶಾಲಾ ಮುಖ್ಯಶಿಕ್ಷಕರಾದ ನಂದಾ ಹರೀಶ್ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಕಲಾವಿದ ಮಣಿ ನಾಲ್ಕೂರು ಅವರನ್ನು ಪ್ರಾಚಾರ್ಯರಾದ ಸೋಮಶೇಖರ ನಾಯಕ್ ಸನ್ಮಾನಿಸಿದರು.
ಉಪನ್ಯಾಸಕರಾದ ಶ್ರುತಿ ಅಶ್ವತ್ಥ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಾಚಾರ್ಯರು ಗಣ್ಯರನ್ನು ಗೌರವಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading