Ad Widget

ಅರಂತೋಡು ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ದತ್ತಿ ನಿಧಿ ವಿತರಣೆ ಹಾಗೂ ಮಾಹಿತಿ ಕಾರ್ಯಗಾರ

ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ  ಕೆ.ಅರ್.ಆನಂದ ಕಲ್ಲುಗದ್ದೆ ಇವರ ದತ್ತಿನಿಧಿಯಿಂದ ವಿತರಿಸಲ್ಪಡುವ ನೋಟ್ ಪುಸ್ತಕಗಳ ವಿತರಣೆ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಮಕ್ಕಳ ಸುರಕ್ಷಾ ಕಾರ್ಯಕ್ರಮ, ಆರೋಗ್ಯ ಮಾಹಿತಿ ಹಾಗೂ ಇಲಾಖಾ ಕಾರ್ಯಗಾರ ಜೂನ್ 21ರಂದು ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯು.ಡಿ.ಶೇಖರ ಸಭಾ ವೇದಿಕೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದ್ದರು.
ಕಾರ್ಯಗಾರ ಉದ್ಘಾಟನೆಯನ್ನು ಸುಳ್ಯ ಠಾಣೆಯ ಪೊಲಿಸ್ ಎ.ಎಸ್.ಐ ತಾರಾನಾಥ  ನೆರವೇರಿಸಿದರು.
ಶ್ರೀಮತಿ ಚಿನ್ನಮ್ಮ ಕಲ್ಲುಗದ್ದೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದ್ದರು.
ಪ್ರಶ್ವಿಜ ಮುಂಡೋಕಜೆರವರು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಮಾಹಿತಿ ನೀಡಿದ್ದರು.
ಮಕ್ಕಳ ಸುರಕ್ಷತೆ ಹಾಗೂ ಕಾನೂನು ಅರಿವು ಬಗ್ಗೆ ಸುಳ್ಯ ಠಾಣಾ ಎ.ಎಸ್.ಐ ತಾರಾನಾಥ ಮಾಹಿತಿ ನೀಡಿದ್ದರು.
ಸುಳ್ಯ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ.ಬಿ ಯವರು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.
ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಭಾನುಮತಿ ಎಸ್.ಬಿ ರವರು ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿ ನೀಡಿದ್ದರು.
ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ, ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ್ ಯು.ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್, ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ಉಪಸ್ಥಿತಿದ್ದರು.
ಶಾಲೆಯ ಜಿ.ಪಿ.ಟಿ ಶಿಕ್ಷಕಿ ರೇಶ್ಮಾ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಧನಂಜಯ ಮರ್ಕಜೆ ಸೇರಿದಂತೆ ಸಹ ಶಿಕ್ಷಕಿಯರು ಸಹಕರಿಸಿದರು.
ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. 
ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಜಿ.ಪಿ.ಟಿ ಶಿಕ್ಷಕಿ ಶ್ರೀಮತಿ ರೇಣುಕಾ  ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading