Ad Widget

ರೋಟರಿ ಕ್ಲಬ್ ಸುಬ್ರಹ್ಮಣ್ಯ ಪದಗ್ರಹಣ ಸಮಾರಂಭ

ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.3 ರಂದು ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.
ಪದಗ್ರಹಣ ಅಧಿಕಾರಿಯಾಗಿ ಪಿ.ಡಿ.ಜಿ ಮೇಜರ್ ಡೋನರ್ ಪ್ರಕಾಶ್ ಕಾರಂತ್ ಪದಗ್ರಹಣ ನಡೆಸಿಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ಹಾಲಿ ಅಧ್ಯಕ್ಷರಾದ ಚಂದ್ರಶೇಖರ ನಾಯರ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಎಸ್.ಎಸ್.ಪಿ.ಯು ಕಾಲೇಜು  ಪ್ರಾಂಶುಪಾಲರಾದ ಸೋಮಶೇಖರ್ ನಾಯಕ್  ಉಪಸ್ಥಿತರಿದ್ದರು.
ರೋಟರಿ  ಝೋನ್ 5 ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ.ಪೈ, ಝೋನ್ 5 ವಲಯ ಸೇನಾನಿ ವಿಜಯಕುಮಾರ್ ಅಮೈ,   ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ  ಡಾ. ರಾಮಮೋಹನ್ ಕೆ.ಎನ್,  ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಕಟ ಪೂರ್ವಾಧ್ಯಕ್ಷರಾದ ಪ್ರಶಾಂತ್ ಕೋಡಿಬೈಲ್, ಕಾರ್ಯದರ್ಶಿ ಚಿದಾನಂದ ಕುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಪದಪ್ರಧಾನ ಬಳಿಕ ಸಭೆಯ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷರಾದ ಜಯಪ್ರಕಾಶ್.ಆರ್ ವಹಿಸಿದ್ದರು.
ನೂತನ ಕಾರ್ಯದರ್ಶಿ  ಭವಾನಿಶಂಕರ ಪೈಲಾಜೆ  ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಾದ
ಸೂರಜ್, ತನ್ವಿಕ.ಎಂ.ಎಚ್, ಪ್ರೀತಿ ಆರ್.ಕೆ, ವರ್ಷಿಣಿ, ತನ್ವಿಕಾ, ಹಾರ್ದಿಕ್.ಎಂ.ಪಿ, ಭವನೀಶ್ ಎಂ.ಆರ್, ಅಂಕುಶ್ ಎಣ್ಣೆಮಜಲು ಅವರುಗಳನ್ನು   ಗೌರವಿಸಲಾಯಿತು.
ಗೋಪಾಲ್ ಎಣ್ಣೆಮಜಲು ಪ್ರಕಾಶ್ ಕಾರಂತ್ ಅವರ ಪರಿಚಯ ಮಾಡಿದರು.
ನೂತನ ಪದಾಧಿಕಾರಿಗಳ ಪರಿಚಯವನ್ನು ಶಿವರಾಮ ಏನೆಕಲ್ಲು ಹಾಗೂ ನಾಗೇಶ್ ಪರಮಲೆ ಮಾಡಿದರು‌.
ನವೀನ್ ವಾಲ್ತಾಜೆ ಪ್ರತಿಭಾನ್ವಿತ ಪಟ್ಟಿ ವಾಚಿಸಿದರು.
ಕ್ಲಬ್ ನಿಂದ ಈ ವರ್ಷ ಪಿ.ಎಚ್.ಎಫ್ ಪಡೆದ ವಿಶ್ವನಾಥ ನಡುತೋಟ, ಮಾಯಿಲಪ್ಪ ಸಂಕೇಶ, ಚಂದ್ರಶೇಖರ ನಾಯರ್ ಹಾಗೂ ಎಮ್.ಪಿ.ಎಚ್.ಎಫ್ ಪಡೆದ ಜಯಪ್ರಕಾಶ್.ಆರ್ ಇವರುಗಳನ್ನು ಗೌರವಿಸಲಾಯಿತು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ  ನೂತನ ಸದಸ್ಯರುಗಳಾದ ಕೃಷ್ಣಪ್ರಸಾದ್.ಆರ್ ಹಾಗೂ ಸೌಮ್ಯ.ಬಿ.ಪೈ ಅವರುಗಳನ್ನು ಸೇರ್ಪಡೆಗೊಳಿಸಲಾಯಿತು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ ಈ ವರ್ಷ ಗೋಲ್ಡನ್ ಪ್ಲಸ್ ಅವಾರ್ಡ್, ಸಿಗ್ನಿಫಿಕೆಂಟ್ ಅವಾರ್ಡ್ ಹಾಗೂ ಎಂಗೇಜ್ಮೆಂಟ್ ಅವಾರ್ಡ್ ಬರಲು ಕಾರ್ಯಕರ್ತರಾದ ಅಧ್ಯಕ್ಷರಾದ ಚಂದ್ರಶೇಖರ ನಾಯರ್ ಹಾಗೂ ಕಾರ್ಯದರ್ಶಿ ಚಿದಾನಂದ ಕುಳ ಅವರುಗಳನ್ನು ಸನ್ಮಾನಿಸಲಾಯಿತು.
ವಿಶ್ವನಾಥ ನಡುತೋಟ ಸಂಪಾದಕತ್ವದ “ಬುಲೆಟಿನ್ ಕುಮಾರಧಾರ” ವನ್ನು ಅಸಿಸ್ಟೆಂಟ್ ಗವರ್ನರ್ ಅವರು ಬಿಡುಗಡೆಗೊಳಿಸಿದರು.
ಕಿಶೋರ್ ಕುಮಾರ್ ಕೂಜುಗೋಡು  ಸ್ವಾಗತಿಸಿದರು, ಭವಾನಿಶಂಕರ ಪೈಲಾಜೆ ವಂದಿಸಿದರು. ರಾಮಕೃಷ್ಣ ಮಲ್ಲಾರ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading