- Saturday
- March 7th, 2026
ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಕಿರಣ.ಬಿ ಇವರ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ತನ್ನ 25ನೇ ಘಟಿಕೋತ್ಸವದ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ ಶಿವಮೊಗ್ಗ ಇಲ್ಲಿ ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾಗಿರುವ ಡಾ. ಷಣ್ಮುಖ ಎಂ.ಸಿ ಇವರ ಮಾರ್ಗದರ್ಶನದಲ್ಲಿ...
ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ನಾಡಿನ ಖ್ಯಾತ ಹಿರಿಯ ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ ಸುಳ್ಯ ಅವರಿಗೆ 85 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಅವರಿಗೆ ಅವರ ಚೊಕ್ಕಾಡಿ ಗೃಹದಲ್ಲಿ ಜನ್ಮದಿನದ ಶುಭಾಶಯಗಳನ್ನು ಕೋರಿ ಪ್ರೀತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಈ ಸನ್ಮಾನ ಕಾರ್ಯಕ್ರಮವನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರು, ಸಾಹಿತಿ, ಗಾಯಕ ಮತ್ತು...
ಸುಳ್ಯದ ಚಿನ್ನಾಭರಣದ ಉದ್ಯಮದಲ್ಲಿ ಹೊಸತನ ಸೃಷ್ಟಿಸಲು ಸ್ವರ್ಣಂ ಜ್ಯುವೆಲ್ಸ್ ಶೀಘ್ರದಲ್ಲಿ ಶುಭಾರಂಭಗೊಳ್ಳಲಿದ್ದು, ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಸೂಂತೋಡು ಎಂಪೋರಿಯಂ ನಲ್ಲಿ ಜು.07 ರಂದು ಉದ್ಘಾಟನೆಗೊಳ್ಳಲಿದೆ.ಪ್ರವೀಣ್.ಬಿ ಗೌಡ, ಭವಿತ್.ಯು ಹಾಗೂ ಲೋಕೇಶ್.ಎಂ.ಎಸ್, ಸಂಜೀವ.ಕೆ ಅವರು ಸ್ವರ್ಣಂ ಜ್ಯುವೆಲ್ಸ್ ನ ಆಡಳಿತ ಪಾಲುದಾರರಾಗಿದ್ದಾರೆ. ಗ್ರಾಹಕರ ಸೇವೆಯಲ್ಲಿ ಚಿನ್ನೋದ್ಯಮದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ.ದೀಪೋಜ್ವಲನ ಕಾರ್ಯಕ್ರಮದಲ್ಲಿ...
ಎಡಮಂಗಲ ಗ್ರಾಮದ ಏನಡ್ಕ ಮಾಧವ ಗೌಡ ರವರು ಜು.03 ರಂದು ನಿಧನರಾದರು.ಅವರಿಗೆ 60 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಸುನಂದಾ, ಸಹೋದರರಾದ ಈಶ್ವರ ಗೌಡ ಏನಡ್ಕ, ಲೋಕಪಾಲ ಗೌಡ ಏನಡ್ಕ, ಆನಂದ ಗೌಡ ಏನಡ್ಕ, ಪದ್ಮನಾಭ ಗೌಡ ಏನಡ್ಕ, ಶಿವರಾಮ ಗೌಡ ಏನಡ್ಕ, ಸಹೋದರಿ ಮೋಹಿನಿ ದಾಸಪ್ಪ ಪಾಲೋಳಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಕಂದಡ್ಕ ಮರಸಂಕ ಸೇತುವೆಯ ಬಳಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಮುಖ್ಯ ರಸ್ತೆ ಬಂದ್ ಆಗಿದೆ. ವಿದ್ಯುತ್ ತಂತಿ ಹಾಗೂ ಕಂಬಕ್ಕೆ ಹಾನಿಯಾಗಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಪೈಚಾರಿನಲ್ಲಿ ಜೂನ್ 09 ರಂದು ನಡೆದ ಬಸ್ ಮತ್ತು ಬೈಕ್ ಮುಖಾಮುಖಿ ಅಪಘಾತದಲ್ಲಿ ಬೈಕ್ ಸವಾರ ಕಲ್ಲುಗುಂಡಿಯ ವೈದ್ಯ ಡಾ. ಶ್ಯಾಮ್ ಭಟ್ ಅವರ ಪುತ್ರ ದುಗ್ಗಲಡ್ಕದ ನಮ್ಮ ಕ್ಲಿನಿಕ್ ನಲ್ಲಿ ವೈದ್ಯರಾಗಿರುವ ಡಾ. ಶಮಂತ್ ಕಾಲಿಗೆ ಗಂಭೀರ ಗಾಯಗಳಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟರೆಂದು...
