- Monday
- May 12th, 2025

ಏ.09 ರಂದು ನಡೆಯಲಿರುವ ಕಲ್ಮಕಾರು ಶಕ್ತಿನಗರದ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ, ಗಣಪತಿ ಹವನ ಹಾಗೂ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾ.24 ರಂದು ನಡೆಯಿತು.ಈ ಸಂದರ್ಭದಲ್ಲಿ ಭಜನಾ ಮಂದಿರದ ಅಡಳಿತ ಸಮಿತಿ, ಭಜನಾ ಮಂಡಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಸೇವಾಪ್ರತಿನಿಧಿ, ಒಕ್ಕೂಟದ ಅಧ್ಯಕ್ಷರು ಹಾಗೂ...

ಕೊಲ್ಲಮೊಗ್ರು ಗ್ರಾಮದ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಸ್ವೀಕಾರವು ಮಾ.20 ರಂದು ವಿದ್ಯುಕ್ತವಾಗಿ ನಡೆಯಿತು.ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶೇಖರ ಅಂಬೆಕಲ್ಲು ಹಾಗೂ ಬಳಗದವರು ಅಧಿಕಾರ ಸ್ವೀಕರಿಸಿದರು. ನೂತನ ವ್ಯವಸ್ಥಾಪನಾ ಸಮಿತಿ ಅಧಿಕಾರ ಸ್ವೀಕರಿಸುವವರೆಗೆ ಆಡಳಿತ ಅಧಿಕಾರಿಗಳಾಗಿದ್ದ ಮೋಹನ್ ಇವರು ಅಧಿಕಾರ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ...

ಸುಬ್ರಹ್ಮಣ್ಯ ಮಾ.24: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುವಂತೆ ಈ ವರ್ಷವೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು. ಪೂರ್ವಾಹ್ನ ಗಂಟೆ 11:00 ರಿಂದ 12:00 ರವರೆಗಿನ ವೃಷಭ ಲಗ್ನದಲ್ಲಿ 10 ನವ ಜೋಡಿಗಳು ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಸ್ಪರ...

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24 ರ ಬೆಳಗ್ಗೆ ಗಣಪತಿ ಹೋಮ, ಶತ ರುದ್ರಾಭಿಷೇಕ, ಲಕ್ಷ್ಮಿ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ತಳೂರು ಹಾಗೂ ಕಂದ್ರಪ್ಪಾಡಿಯಿಂದ ಶ್ರೀ ರಾಜ್ಯದೈವ ಮತ್ತು ಪುರುಷ ದೈವದ ಭಂಡಾರ ಶ್ರೀಕ್ಷೇತ್ರಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಮಾಜಿ ಅಧ್ಯಕ್ಷರಾದ ಬಿ.ಕೆ.ಬೆಳ್ಯಪ್ಪ...

ಸಂಪಾಜೆ ಗ್ರಾಮ ಪಂಚಾಯಿತಿ ವತಿಯಿಂದ ವಿಕಲಚೇತನರಾದ ಸುರೇಶ ಗೂನಡ್ಕ ರವರ ಮನೆ ರಿಪೇರಿಗೆ ಸಹಾಯಧನ ಹಾಗೂ ಕಡೆಪಾಲ ನಿವಾಸಿ ಅನಿಶ್ ಪಿಂಟೋ ರವರಿಗೆ ವಾಟರ್ ಬೆಡ್ ನೀಡಲಾಯಿತು. ಸಹಾಯಧನ ವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ, ಉಪಾಧ್ಯಕ್ಷರಾದ ಎಸ್. ಕೆ.ಹನೀಫ್,...

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 5 ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಾ.25ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 7.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show...

ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ-2025 ದಿನಾಂಕ 23-03-2025 ರಂದು ದೇವಮ್ಮ ಕಾಂಪ್ಲೆಕ್ಸ್ ಸುಳ್ಯ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಇವರು ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2025 ನೇ ಸಾಲಿನ ಚಂದನ ಸಾಹಿತ್ಯ ರತ್ನ ಪ್ರಶಸ್ತಿ...

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24 ರ ಬೆಳಗ್ಗೆ ಗಣಪತಿ ಹೋಮ, ಶತ ರುದ್ರಾಭಿಷೇಕ, ಲಕ್ಷ್ಮಿ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ಸಂಜೆ ಭಜನೆ ರಾತ್ರಿ ಶ್ರೀ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಲಿದೆ. ರಾತ್ರಿ ದಿ| ಕೀರ್ತಿಶೇಷ ದೇವಕಿ ಸ್ಮರಣಾರ್ಥ ಶ್ರೀ ಪಂಜುರ್ಲಿ ಪ್ರಸಾದಿತ ಯಕ್ಷಗಾನ ಮಂಡಳಿ ಸಾಸ್ತಾನ...

ಕಡಬ ತಾಲೂಕು ಬಳ್ಪ ಗ್ರಾಮದ ಜೋಗಿಮನೆ ಚೆನ್ನಕೇಶವ ಜೋಗಿ ಮಾ.11 ರಂದು ಮನೆಯಿಂದ ತೆರಳಿದವರು ಇದುವರೆಗೆ ಪುನಃ ಹಿಂತಿರುಗಿ ಬಾರದೇ ಇದ್ದುದರಿಂದ ಮನೆಯವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರಿಗೆ 61 ವಯಸ್ಸಾಗಿತ್ತು. ದಿನಾಂಕ 11-03-2025 ಮಂಗಳವಾರದಂದು ಮನೆಯಿಂದ ಕೊಡಿಂಬಾಳಕ್ಕೆ ಸಾರಣೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೋದವರು ಇಲ್ಲಿತನಕ ಮನೆಗೆ ಮರಳಿರುವುದಿಲ್ಲ. ಇವರ ಮೊಬೈಲ್...

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಜ ಚಂದ್ರಶೇಖರ ಎಂಬವರು ಮಾವಿನಕಾಯಿ ಜೊಯ್ಯುವ ವೇಳೆ ಮರದಿಂದ ಬಿದ್ದು ಗಂಬೀರ ಗಾಯಗೊಂಡು ಮಂಗಳೂರಿನ ಎ.ಜೆ. ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಬಡತನದಲ್ಲಿರುವ ಇವರ ಕುಟುಂಬಕ್ಕೆ ಅಘಾತವನ್ನುಂಟು ಮಾಡಿದ್ದು ಚಿಕಿತ್ಸಾ ವೆಚ್ಚ ಭರಿಸಲು ಪರದಾಡುವಂತಾಗಿದೆ. ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಜಳನ್ನು ಹೊಂದಿರುವ ಈ ಬಡ ಕುಟುಂಬಕ್ಕೆ ಸಾರ್ವಜನಿಕ ಸಹೃದಯಿಗಳು...

All posts loaded
No more posts