Ad Widget

ಬೆಳ್ಳಾರೆ : ಗ್ರಾ.ಪಂ. ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಮಹಿಳಾ ಓದುಗರೊಂದಿಗೆ ಸಂವಾದ – ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅಪಾರ:ಸಾಹಿತಿ ಶ್ರೀಮತಿ ಅಶ್ವಿನಿ ಕೋಡಿಬೈಲು

ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಆಶ್ರಯದಲ್ಲಿ ಸಂಸ್ಥೆಯ ದಶ ಸಂಭ್ರಮ ಅಂಗವಾಗಿ ನಡೆದ ದಶ ಕಾರ್ಯಕ್ರಮಗಳು, ಮಹಿಳಾ ಓದುಗರೊಂದಿಗೆ ಒಂದು ದಿನ, ಮಹಿಳಾ ಸಾಹಿತಿಗಳೊಂದಿಗೆ ಸಂವಾದ ಮತ್ತು ಸುಳ್ಯ ತಾಲೂಕಿನ ಮಹಿಳಾ ಸಾಹಿತಿಗಳ ಪರಿಚಯ ಕಾರ್ಯಕ್ರಮ ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಮಾ.3ರಂದು ನಡೆಯಿತು. ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು...

ಕಂದ್ರಪ್ಪಾಡಿ ರಾಜ್ಯದೈವ ಪುರುಷ ದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಳಿಕಾಪ್ರಸಾದ್ ಮುಂಡೋಡಿ

ಕಂದ್ರಪ್ಪಾಡಿ ರಾಜ್ಯದೈವ ಪುರುಷ ದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಳಿಕಾಪ್ರಸಾದ್ ಮುಂಡೋಡಿ ಆಯ್ಕೆಯಾಗಿದ್ದಾರೆ. ಸೋಮಶೇಖರ ಕೇವಳ, ಶ್ರೀಮತಿ ಗೀತಾ ತಿಮ್ಮಪ್ಪ ಕಡ್ಯ, ಜಯರಾಮ ಕಡ್ಲಾರ್, ಶ್ರೀಮತಿ ಜಾನಕಿ ಚಿದಾನಂದ ಪೇರಳಕಜೆ, ಯಂ. ಆರ್. ಪುರುಷೋತ್ತಮ ಮುಂಡೋಡಿ, ಅಜಯ್ ವಾಲ್ತಾಜೆ, ಕರುಣಾಕರ ದೇವರಗುಂಡ, ಶೂರಪ್ಪ ದೇವ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದಾರೆ.
Ad Widget

ಮಡಪ್ಪಾಡಿ – ಮರ್ಕಂಜ ಮಾರ್ಗವಾಗಿ ಸುಳ್ಯಕ್ಕೆ ನೂತನ ಸರಕಾರಿ ಬಸ್ಸು ಸೇವೆ ಪ್ರಾರಂಭ

ಮಡಪ್ಪಾಡಿಯಿಂದ ಬೆಳಿಗ್ಗೆ 7.00ಗಂಟೆಗೆ ಹೊರಟು ಮರ್ಕಂಜ – ದೊಡ್ಡತೋಟ ಮಾರ್ಗವಾಗಿ ಸುಳ್ಯಕ್ಕೆ ಬಸ್ಸು ಸೇವೆ (03) ಇಂದಿನಿಂದ ಪ್ರಾರಂಭವಾಗಿದೆ. ಇದೀಗ ಮಡಪ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯವರ ಮೂಲಕ ಮಾಡಿದ ಪ್ರಯತ್ನದ ಫಲವಾಗಿ ಇದೀಗ ಬಸ್ಸು ಸೇವೆಯನ್ನು, ಕರ್ನಾಟಕ ಸಾರಿಗೆ ಇಲಾಖೆ ಆರಂಭಿಸಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಉಷಾ...

ಸಿರಿಬಾಗಿಲು ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಅವರ ಸನ್ಮಾನ ಸಮಾರಂಭ ಹಾಗೂ ಸತ್ಕಾರ ಕೂಟ.

ಸುಬ್ರಹ್ಮಣ್ಯ ಮಾ.2: ಸುಬ್ರಹ್ಮಣ್ಯ ಸಮೀಪದ ಸಿರಿಬಾಗಿಲು ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಅವರಿಗೆ ಇಂದು ಆದಿತ್ಯವಾರ ಸನ್ಮಾನ ಸಮಾರಂಭ ಹಾಗೂ ಸತ್ಕಾರ ಕೂಟ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು. ಕಾರ್ಯಕ್ರಮವನ್ನು ಕೊಂಬಾರು ಗ್ರಾಮ...

ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿಯವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಸದಸ್ಯರುಗಳಾದ ಕೇಶವ ಹೊಸೋಳಿಕೆ, ಪುರುಷೋತ್ತಮ ಬದಿಯಡ್ಕ, ಜಯಾನಂದ ಪಟ್ಟೆ, ಶಿವಪ್ರಸಾದ್ ಕಂದ್ರಪ್ಪಾಡಿ, ಸನತ್ ಮುಳುಗಾಡು, ಉಷಾ ಮಲ್ಕಜೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ಉಪಸ್ಥಿತರಿದ್ದರು.

ಸ್ನೇಹ ಶಾಲೆಯಲ್ಲಿ ಡಾ ಚೂಂತಾರು ರವರಿಗೆ ಸನ್ಮಾನ

ವೈದ್ಯಕೀಯ ,ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸೇವೆ ಹಾಗೂ ಕೊಡುಗೆಗಾಗಿ ಸುಳ್ಯದ ಸ್ನೇಹ ಶಾಲೆಯಲ್ಲಿ ಡಾ ಮುರಲೀ ಮೋಹನ್ ಚೂಂತಾರು ಮತ್ತು ಡಾ ರಾಜಶ್ರೀ ಮೋಹನ್ ಅವರನ್ನು ಶಾಲು ಹೊದಿಸಿ ಫಲ ಪುಷ್ಪ ಫಲಕ ನೀಡಿ ಸನ್ಮಾನ ಮಾಡಲಾಯಿತು. ಪದ್ಮಶ್ರೀ ಶ್ರೀ ಗಿರೀಶ್ ಭಾರದ್ವಾಜ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಾ ಚಂದ್ರಶೇಖರ...

ಪ್ರೇಕ್ಷಕರ ಮನಗೆದ್ದು ಯಾನ ಮುಂದುವರೆಸಿದ “ಭಾವ ತೀರ ಯಾನ” – ಪುತ್ತೂರಿನಲ್ಲಿ ಮಾ.3ರಿಂದ ಮಾ.6 ರ ತನಕ ಸಂಜೆ 7.15 ಕ್ಕೆ ಶೋ ಲಭ್ಯ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ರಾಜ್ಯಾದ್ಯಾಂತ ಪ್ರೇಕ್ಷಕರ ಮೆಚ್ಚುಗೆ ಪಡೆದು ಹೌಸ್ ಫುಲ್ ಪ್ರದರ್ಶನದೊಂದಿಗೆ ಎರಡನೇ ವಾರದಲ್ಲಿ ಮುಂದುವರೆಯಿತ್ತಿದೆ.   ಪುತ್ತೂರಿನ  ಭಾರತ್ ಸಿನಿಮಾಸ್ ನಲ್ಲಿ  ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬೇಡಿಕೆ ಹಿನ್ನೆಲೆಯಲ್ಲಿ ಮಾ. 03 ರಿಂದ 06 ರವರೆಗೆ ಸಂಜೆ 7.15...

ಐವರ್ನಾಡು : ಮಾಸಿಕ ಸ್ವಚ್ಛತಾ ಕಾರ್ಯಕ್ರಮ – ಗೆಳೆಯರ ಬಳಗ ಸಾಥ್

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ಗೆಳೆಯರ ಬಳಗ ಐವರ್ನಾಡು ರವರ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಪಂಚಾಯತ್ ವಠಾರ ಹಾಗೂ ಮುಖ್ಯ ರಸ್ತೆ ಯ ಬದಿಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ವಠಾರ ದಿಂದಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡಿನ ವಠಾರದ ವರೆಗೆ ನಡೆಯಿತು . ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ...

ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ಡಾ. ಅನುರಾಧಾ ಕುರುಂಜಿಯವರಿಂದ ಪ್ರಬಂಧ ಮಂಡನೆ

ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವ ವಿಖ್ಯಾತ ಹಂಪಿ ಉತ್ಸವವು ಫೆಬ್ರುವರಿ 28 ರಿಂದ ಮಾರ್ಚ್ 2 ರವರೆಗೆ ನಡೆಯುತ್ತಿದ್ದು, ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಹಮ್ಮಿಕೊಂಡ ಮಹಿಳಾ ವಿಚಾರ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರೂ, ವ್ಯಕ್ತಿತ್ವವವಿಕಸನ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರು ಪ್ರಬಂಧ ಮಂಡನೆ ಮಾಡಿದರು. ಮಹಿಳಾ...

ಅವೈಜ್ಞಾನಿಕ ಕಾಮಗಾರಿ – ಕುರುಂಜಿಭಾಗ್ ನಲ್ಲಿ ಪಾದಾಚಾರಿಗಳಿಗೆ ನರಕ ದರ್ಶನ

ಕುಡಿಯುವ ನೀರಿನ ಯೋಜನೆಗಾಗಿ ಸುಳ್ಯ ನಗರದಲ್ಲಿ ಪೈಪ್ ಅಳವಡಿಕೆ ಕಾರ್ಯ ಭರದಿಂದ ನಡೆಯುತ್ತಿದ್ದು ಕೆಲವೆಡೆ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ. ಕುರುಂಜಿಭಾಗ್ ನಲ್ಲಿ ಬೇರೆಡೆ ಜಾಗವಿದ್ದರೂ ರಸ್ತೆ ಮಧ್ಯದಲ್ಲಿಯೇ ಕಾಂಕ್ರಿಟ್ ಒಡೆದು ಪೈಪ್ ಹಾಕಲಾಗುತ್ತಿದೆ. ಇಲ್ಲಿ ಮೊದಲಿದ್ದ ಕುಡಿಯುವ ನೀರಿನ ಪೈಪ್ ಲೈನ್ ಗಳನ್ನು ತುಂಡರಿಸಲಾಗಿದ್ದು...
Loading posts...

All posts loaded

No more posts

error: Content is protected !!