- Monday
- April 21st, 2025

ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ.13ರಂದು ವೆಂಕಟ್ರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಶಾರದ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸ್ವರ್ಣಕಲಾ ಎ.ಎಸ್. ಆಗಮಿಸಿ ಮಹಿಳಾ ದಿನಾಚರಣೆಯ ಕುರಿತು ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳಿಕ ಸಮಾಜದಲ್ಲಿ ವಿವಿಧ ರೀತಿಯಲ್ಲಿ...

ಯುವಕ ಮಂಡಲ(ರಿ) ಮಡಪ್ಪಾಡಿ ಹಾಗೂ ಶ್ರೀ ರಾಮ ಭಜನಾ ಮಂಡಳಿ ಇದರ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಕುಶಾಲಪ್ಪ ಪಾರೆಮಜಲು ಇವರಿಗೆ ಗ್ಯಾಸ್ ಸ್ಟೌವ್ ಹಾಗೂ ಸಿಲಿಂಡರ್ ನ್ನು ಕೊಡುಗೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿನಯ ಕುಮಾರ್ ಮುಳುಗಾಡು, ಉಪಾಧ್ಯಕ್ಷರಾದ ಸಚಿನ್ ಬಳ್ಳಡ್ಕ, ನಿರ್ದೆಶಕರಾದ ಕರುಣಾಕರ ಪಾರೆಪ್ಪಾಡಿ, ಯುವಜನ ಸಂಯುಕ್ತ...

ಅಮರ ಸಂಘಟನಾ ಸಮಿತಿ (ರಿ.), ಸುಳ್ಯ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ಇದರ ಸಹಕಾರದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವು ಮಾ. 16 ಭಾನುವಾರದಂದು ಕುಕ್ಕುಜಡ್ಕದ ಅಮರಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಲಿರುವುದು. ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33ಕೆ.ವಿ ವಿದ್ಯುತ್ ಮಾರ್ಗದಲ್ಲಿ ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಹಿಂದೆ ಹೊಸ ವಿದ್ಯುತ್ ಮಾರ್ಗ ಎಳೆಯುವ ಸಂದರ್ಭದಲ್ಲಿ ಹಳೆಯ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಡುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದರೂ, ಹಳೆಯ ವಿದ್ಯುತ್ ಮಾರ್ಗವನ್ನು ಯಾವುದೇ ನಿರ್ವಹಣೆ ಮಾಡದೇ ಇದ್ದುದರಿಂದ ಬದಲಿ ಮಾರ್ಗವಾಗಿ ಹಳೆಯ ವಿದ್ಯುತ್ ಲೈನ್ ಅನ್ನು ಬಳಸಲು ಸಾಧ್ಯವಿಲ್ಲದಂತಾಗಿದೆ.....

ಜಟ್ಟಿಪಳ್ಳ ರಸ್ತೆಯ ವಿಶ್ವಕಾಂಪ್ಲೆಕ್ಸ್ ಎದುರು ಭಾಗದಲ್ಲಿ ರಸ್ತೆಗೆ ತೆಂಗಿನಮರ ಬಿದ್ದ ಪರಿಣಾಮ ವಿದ್ಯುತ್ ಲೈನ್ ಗೆ ಹಾನಿಯಾಗಿದ್ದು ಕಂಬ ಮುರಿದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಅಟೋ ದ ಎದುರು ಭಾಗಕ್ಕೆ ಹಾನಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಸುಳ್ಯದ ಯುವ ಸಂಗೀತ ನಿರ್ದೆಶಕ ಮಯೂರ ಅಂಬೆಕಲ್ಲು ಸಾರಥ್ಯದಲ್ಲಿ ಮೂಡಿಬಂದ "ಭಾವ ತೀರ ಯಾನ" ಚಲನಚಿತ್ರ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದ್ದು ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಮಾ. 13 ಮತ್ತು 14 ರಂದು ಸಂಜೆ 7.15 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ...

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವವು ಮಾ 15,16,17 ಹಾಗೂ 18 ರಂದು ವಿಜ್ರಂಭಣೆಯಿಂದ ನಡೆಯಲಿದೆ. ಮಾ.15 ರಂದು ಬೆ.10 ರಿಂದ ಹಸಿರುವಾಣಿ ಮೆರವಣಿಗೆ , ಕಲವರ ನಿರಕ್ಕಲ್ (ಉಗ್ರಾಣ ತುಂಬುವುದು), ರಾ.7.00 ರಿಂದ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಗಳಿಗೆ ಕೂಡುವುದು, ಶ್ರೀ ಕೊರ್ತಿಯಮ್ಮನ ಕೋಲಗಳು, ಶ್ರೀ ಪೊಟ್ಟನ್ ದೈವದ ಕೋಲ ನಡೆಯಲಿದೆ....

ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್‌ಗೆ ವಿಸ್ತರಿಸುವುದಕ್ಕೆ ರೈಲ್ವೆ ಮಂಡಳಿ ಈಗಾಗಲೇ ಮಂಜೂರಾತಿ ನೀಡಿದ್ದು, ರೈಲ್ವೆ ಸಚಿವ ವಿ. ಸೋಮಣ್ಣ ಅವರ ದಿನಾಂಕ ನಿಗದಿಪಡಿಸಿಕೊಂಡು ಮಾರ್ಚ್ ಅಂತ್ಯದೊಳಗೆ ಈ ರೈಲು ಸೇವೆಗೆ ಚಾಲನೆ ನೀಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾ.12ರಂದು ರೈಲ್ವೆ ಖಾತೆ ರಾಜ್ಯ ಸಚಿವ...

ಮಾ.13 ರಂದು ಸಂಜೆ ಸುರಿದ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿಯಲ್ಲಿ 33/11 ಕೆ.ವಿ. ಲೈನ್ ಗೆ ಮರ ಬಿದ್ದ ಕಾರಣ ವಿದ್ಯುತ್ ಕಂಬ ಮುರಿದ ಹಿನ್ನೆಲೆಯಲ್ಲಿ ಸುಳ್ಯಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜತೆಗೆ ಇಲ್ಲಿ ಕಾವು ಸಬ್ ಸ್ಟೇಷನ್ ನಿಂದ ಬರುವ ಕನಕಮಜಲು 11 ಕೆ.ವಿ.ಪೀಡರ್ ನ 2 ಕಂಬಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ...

All posts loaded
No more posts