- Wednesday
- May 14th, 2025

ಸದೃಢ ಭಾರತ ಕಟ್ಟುವಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ಪೂಜಾ ಎಸ್ ನಾಯಕ ಹೇಳಿದರು. ಅವರು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಆಶ್ರಯ ದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಿಂದ 20 ಮಾರ್ಚ್ 2025 ವಿಧಾನಸಭೆಯ ಅಧಿವೇಶನಕ್ಕೆ ಅಂತಿಮ ಬಿ ಎ ವಿದ್ಯಾರ್ಥಿಗಳು ಶೈಕ್ಷಣಿಕ ಭೇಟಿ ನೀಡಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಸ್ವಾತಿ ಕೆ ಮತ್ತು ಉಪನ್ಯಾಸಕ ಭರತ್ ಎಂ.ಎಲ್ ಅವರ ಮಾರ್ಗದರ್ಶನದಲ್ಲಿ ಮತ್ತು ಪ್ರಾಕ್ತನ ವಿದ್ಯಾರ್ಥಿ ಜಯಪ್ರಕಾಶ್ ಎಂ.ಸಿ a ಅವರ ಸಹಕಾರದೊಂದಿಗೆ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ...

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 5 ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಾ.24ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 7.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show...

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಗೆ ಸದಸ್ಯರ ನೇಮಕವಾಗಿದೆ ಎಂದು ಉಸ್ತುವಾರಿ ಸಚಿವರು ಕಳುಹಿಸಿದ್ದು ಎನ್ನಲಾದ ಪಟ್ಟಿಯೊಂದು ವೈರಲ್ ಆಗುತ್ತಿದ್ದು, ಈ ಪಟ್ಟಿಯಲ್ಲಿ ಕಡಬ ತಾಲೂಕಿನ ಅಜಿತ್ ಕುಮಾರ್ ಪೂಜಾರಿ ವಾಲೇರಿ ಗೋಳಿತೊಟ್ಟು ಎಂಬ ಹೆಸರಿದೆ. ಇದರ ಬಗ್ಗೆ ಕಡಬದ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು ಬರಹವೊಂದು ವೈರಲ್ ಆಗುತ್ತಿದೆ. ಈ ಬಗ್ಗೆ...

ಪುತ್ತೂರು: ಕಾರಂಜಿಯಲ್ಲೂ ಒಂದು ಧ್ಯೇಯವಿದೆ, ಅದರ ನೀರು ಹೇಗೆ ಮೇಲಕ್ಕೆ ಚಿಮ್ಮುತ್ತದೋ ಅದೇ ರೀತಿ ನಮ್ಮ ಜೀವನೋತ್ಸಾಹವು ಮೇಲೆ ಏರುತ್ತಿರಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮುಂಭಾಗದಲ್ಲಿ, ದಿವಂಗತ ಜಿ.ಎಲ್.ಆಚಾರ್ಯ ಅವರ ಜನ್ಮ ಶತಾಬ್ಧಿಯ ಸನೆನಪಿಗಾಗಿ...

ಸುಬ್ರಹ್ಮಣ್ಯ ಮಾ.22: ಪಶ್ಚಿಮ ಘಟ್ಟ ಪ್ರದೇಶ ವಿಶಾಲವಾಗಿದ್ದು ದಟ್ಟ ಕಾನನದಿಂದ ಕೂಡಿದ್ದು ಸ್ವಚ್ಛಂದವಾದ ಗಾಳಿ ನಾವು ಪಡೆಯುತ್ತಾ ಇದ್ದೇವೆ. ಬೇಸಿಗೆಯ ಬಿರು ಬಿಸಿಲಿನಲ್ಲಿ ಕೂಡ ಕಾಡುಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸಿ ಜರಿ ತೊರೆಗಳಲ್ಲಿ ಇರುವ ನೀರನ್ನ ಕುಡಿದು ಜೀವಿಸ್ತ ಇದ್ದಾವೆ. ಹೀಗಿರುವಾಗ ರಾಜ್ಯ ಸರಕಾರವು ಪ್ರಾಣಿಗಳಿಗೆ ನೀರು ಕುಡಿಯಲು ಬೇಕಾದಷ್ಟು ನೀರು ಹಾಗೂ ಆಹಾರ ಇಲ್ಲ ಹಾಗೂ...
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 5 ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮಾ.23ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು...

ಸುಬ್ರಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಸರ್ಕಾರದ ಯೋಜನಾ ಸಚಿವ ಡಿ. ಸುಧಾಕರ್ ಮಾ.22 ರಂದು ಮಧ್ಯಾಹ್ನ ಭೇಟಿ ನೀಡಿದರು. ಸಚಿವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಯೇಸುರಾಜ್ ಅವರು ಸ್ವಾಗತಿಸಿ ಬರಮಾಡಿಕೊಂಡರು. ಸಚಿವರು ಶ್ರೀಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ತುಲಾಭಾರ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯಆಮಂತ್ರಣ ಪತ್ರಿಕೆಯನ್ನು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೀಡಲಾಯಿತು.ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಶ್ರೀ ದೇವಳಕ್ಕೆ ಆಗಮಿಸಿ ನೀಡುವ ಮೂಲಕ ವಿರಾಟ್ ದೇವತಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.ಬಳಿಕ ಶ್ರೀ ದೇವಳದಿಂದ ಬೋಜನ...

ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ಬಳಿ ರಕ್ಷಿತಾರಣ್ಯದಲ್ಲಿ ಆನೆಯೊಂದು ಸತ್ತು ಕೊಳೆತ ಸ್ಥಿತಿಯಲ್ಲಿ ಮಾ.21ರಂದು ಪತ್ತೆಯಾಗಿದ್ದು, ಸಹಜವಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ವಯಸ್ಸಾಗಿರುವ ಆನೆಯಾಗಿದ್ದು ಕಲ್ಲಿನ ಎಡೆಯಲ್ಲಿ ಕಾಲು ಸಿಲುಕಿ ಸಾವು ಸಂಭವಿಸಿರಬುದು. ಮೂರು ನಾಲ್ಕು ದಿನಗಳ ಹಿಂದೆ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

All posts loaded
No more posts