ಸುಳ್ಯದಲ್ಲಿ ಸಂಚಲನ ಮೂಡಿಸಿದ್ದ ಮಹಿಳೆಗೆ ಹಲ್ಲೆ ಪ್ರಕರಣಲ್ಲಿ ಅರೋಪಿಯಾಗಿರುವ ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರಿಗೆ ಮಧ್ಯಕಾಲಿಕ ನಿರೀಕ್ಷಣಾ ಜಾಮೀನು ನ್ಯಾಯಾಲಯ ಮಂಜೂರು ಮಾಡಿದೆ.
ಶರೀಫ್ ಕಂಠಿ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿ, ಅರ್ಜಿಯನ್ನು ಅತೀ ತುರ್ತಾಗಿ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದರು. ಈ ಬಗ್ಗೆ ವಿಚಾರಣೆಗೆ ತೆಗೆದುಕೊಂಡ 5 ನೇ ಹೆಚ್ಚುವರಿ ನ್ಯಾಯಾಲಯವು ವಕೀಲರ ವಾದವನ್ನು ಆಲಿಸಿ ಈ ಪ್ರಕರಣದಲ್ಲಿ ಮುಂದಿನ ಆದೇಶ ಆಗುವ ತನಕ ಅರೋಪಿ ಶರೀಫ್ ಕಂಠಿಯವರ ಮೇಲೆ ಯಾವುದೇ ಆತುರದ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂಬ ಅದೇಶವನ್ನು ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ ಯವರು ನೀಡಿದ್ದಾರೆ. ಹಾಗೂ ಸರಕಾರಿ ಅಭಿಯೋಜಕರ ಆಕ್ಷೇಪಣೆಗಾಗಿ ದಿನಾಂಕ 3/4/2025 ಕ್ಕೆ ಮುಂದೂಡಿದ್ದಾರೆ. ಅರೋಪಿ ಪರ ಸುಳ್ಯದ ಹಿರಿಯ ನ್ಯಾಯವಾದಿ ಯಂ ವೆಂಕಪ್ಪ ಗೌಡ ,ಚಂಪಾ ಗೌಡ ,ರಾಜೇಶ ಬಿಜಿ ಹಾಗು ಶಾಮಪ್ರಸಾದ್ ನಿಡ್ಯಮಲೆ ವಾದಿಸಿರುತ್ತಾರೆ.
- Saturday
- May 17th, 2025