
ಸುಳ್ಯ ನಗರ ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಶರೀಫ್ ಕಂಠಿಯವರ ಮೇಲೆ ಮಹಿಳೆಯ ಮೇಲೆ ಹಲ್ಲೆ ಎಂಬ ಸುಳ್ಳು ಆರೋಪವನ್ನು ಹೊರಿಸಿ ದೂರು ಕೊಟ್ಟಿರುವುದು ಖಂಡನೀಯ. ನಗರ ಪಂಚಾಯತ್ ಸದಸ್ಯನಾಗಿ ತಮ್ಮ ವಾರ್ಡಿನಲ್ಲಿ ಜಾತ್ಯತೀತವಾಗಿ ಅಬಿವೃದ್ದಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಒಬ್ಬ ಜನಪ್ರತಿನಿಧಿಯಾಗಿರುವ ಇವರ ಮೇಲೆ ಈ ರೀತಿಯ ಸುಳ್ಳು ಆರೋಪ ಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಇದರ ಹಿಂದಿರುವ ಸತ್ಯಾ ಸತ್ಯತೆಯನ್ನು ಬಯಲಿಗೆಳೆಯಬೇಕಾಗಿ ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ ಆಗ್ರಹಿಸಿದ್ದಾರೆ. ಯಾವುದೋ ಪೂರ್ವ ದ್ವೇಷ ಇಟ್ಟು ಜನ ಪ್ರತಿನಿಧಿಗಳಿಗೆ ಷಡ್ಯಂತ್ರ ರೂಪಿಸಿ ಪ್ರಕರಣದಲ್ಲಿ ಸಿಲುಕಿಸಿ ಸಾಮಾಜಿಕ ವಾಗಿ ತೊಡಗಿಸಿಕೊಂಡಿರುವ ಕಂಠಿ ಯವರ ತೇಜೋವಧೆ ಮಾಡುವ ಹುನ್ನಾರ ವಾಗಿದೆ. ಈ ಪ್ರಕರಣದಲ್ಲಿ ಕಾಣದ ಕೈಗಳ ಕುತಂತ್ರ ಇದ್ದು ಇಲಾಖೆ ಪ್ರಕರಣವನ್ನು ಗಂಭೀರ ವಾಗಿ ತೆಗೆದು ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ತರಲಿ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ ಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
