
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ವಲಯದ ನೆಟ್ಟಾರು ಕಾರ್ಯ ಕ್ಷೇತ್ರದ ಧನ್ಯಶ್ರೀ ಸಂಘದ ಸದಸ್ಯರಾದ ನೆಸಿಮಾರವರು ಮೈಕ್ರೋ ಬಚತ್ ಪಾಲಿಸಿ ಮಾಡಿಸಿದ್ದು ಅನಾರೋಗ್ಯದ ಕಾರಣ ಮರಣ ಹೊಂದಿದ್ದು, ಮೈಕ್ರೋ ಬಚತ್ ಮರಣ ಸಾಂತ್ವನ ಮೊತ್ತ ಎರಡು ಲಕ್ಷ ರೂಪಾಯಿ ಮಂಜೂರಾತಿ ಪತ್ರವನ್ನು ವಿನಿಯೋಗದಾರದ ರಫೀಕ್ ರವರಿಗೆ ಒಕ್ಕೂಟದ ಅಧ್ಯಕ್ಷರಾದ ಅಣ್ಣುರವರು ಮಾ.29 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನೆಟ್ಟಾರು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವಸಂತ್ ನೆಟ್ಟಾರು, ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ಮೇಡಂ, ಸೇವಾಪ್ರತಿನಿಧಿ, ಕು. ಪ್ರಿಯಾ.ಕೆ ಹಾಗೂ ಧನ್ಯಶ್ರೀ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.
