
ಸುಳ್ಯ: ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವ, ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಗಳ ಸನ್ನಿಧಿಯಲ್ಲಿ ಎ.5 ರಿಂದ 6 ರವರೆಗೆ ನಡೆಯುವ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ಮಾ.28 ರಂದು ಶುಕ್ರವಾರ ಸಾರ್ವಜನಿಕ ಶ್ರೀ ದುರ್ಗಾಪೂಜೆಯು ಪುರೋಹಿತ ಶಿವಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಹೊಸಗದ್ದೆ, ಸಂಚಾಲಕ ಜಗನ್ನಾಥ ಜಿ. ಮಿತ್ತಡ್ಕ, ಕಾರ್ಯದರ್ಶಿ ಸುಂದರ ಕುದ್ಪಾಜೆ, ಕೋಶಾಧಿಕಾರಿ ರಮೇಶ್ ಕೊಡಂಕೀರಿ, ಉಪಾಧ್ಯಕ್ಷ ಸುರೇಶ್ ನಾರಾಜೆ, ನೇಮೋತ್ಸವ ಸಮಿತಿ ಅದ್ಯಕ್ಷ ಸೋಮಶೇಖರ್ ದೋಳ, ಕಾರ್ಯದರ್ಶಿ ಪ್ರಸನ್ನ ಕೊಡಂಕಿರಿ, ಕೋಶಾಧಿಕಾರಿ ಪ್ರಶಾಂತ ಕೊಡಂಕೀರಿ, ರಮೇಶ್ ಇರಂತಮಜಲು, ತಾರಾ ಆರ್ ರೈ, ಮಾಜಿ ನ.ಪಂ ಸದಸ್ಯೆ ಜಾನಕಿ ನಾರಾಯಣ, ನಳಿನಾಕ್ಷಿ ಭಟ್, ತನುಜ, ಮಮತ ಜಯನಗರ, ಹಾಗೂ ದೈವಸ್ಥಾನದ ಪಾತ್ರಿಗಳು ಭಾಸ್ಕರ ನಾರಾಜೆ, ಬಾಬು ಕೊರಂಬಡ್ಕ, ಮೋಹನ್ ಹೊಸಗದ್ದೆ ಮತ್ತು ವ್ಯವಸ್ಥಾಪನ ಸಮಿತಿ ಹಾಗೂ ನೇಮೋತ್ಸವ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ದುರ್ಗಾಪೂಜೆಯ ಪ್ರಯುಕ್ತ ಜಯರಾಮ ಶಾಂತಿನಗರ ಮತ್ತು ಬಳಗದವರಿಂದ ‘ಭಕ್ತಿ ಗಾನಮೃತ’ ಕಾರ್ಯಕ್ರಮ ನಡೆಯಿತು.
ದುರ್ಗಾಪೂಜೆಯ ಮಹಾ ಮಂಗಳಾರತಿಯ ಬಳಿಕ ಪ್ರಸಾದ ವಿತರಣೆ, ಮತ್ತು ಅನ್ನಸಂತರ್ಪಣೆ ನಡೆಯಿತು.
