
ಎಲಿಮಲೆ-ಅರಂತೋಡು ರಸ್ತೆ ಅಭಿವೃದ್ಧಿ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ 1.25ಕೋಟಿ ವೆಚ್ಚದ ಕಾಮಗಾರಿಗೆ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಮಾ.29 ರಂದು ಗುದ್ದಲಿಪೂಜೆ ನೆರವೇರಿಸಿದರು. ಎಲಿಮಲೆಯಿಂದ ರಸ್ತೆ ಕಾಮಗಾರಿ ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಗೊಂಡ 8 ಕೋಟಿ ಅನುದಾನಲ್ಲಿ 1.25 ರೂಪಾಯಿಯನ್ನು ಈ ರಸ್ತೆಗೆ ಇರಿಸಲಾಗಿದೆ. ಈಗಾಗಲೇ ಸರಕಾರಕ್ಕೆ 3 ವಿಧಗಳಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿ ಪ್ರತಿ ಬಾರಿಯೂ ಸಚಿವರನ್ನು ಭೇಟಿಯಾಗಿ ಈ ರಸ್ತೆಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ
ವೆಂಕಟ್ ದಂಬೆಕೊಡಿ, ಮುಳಿಯ ಕೇಶವ ಭಟ್, ಕೃಷ್ಣಯ್ಯ ಮೂಲೆತೋಟ, ಮಡಪ್ಪಾಡಿ ಸಹಕಾರಿ ಸಂಘದ ಅಧ್ಯಕ್ಷ ವಿನಯ್ ಮುಳುಗಾಡು, ದಿವಾಕರ ಮುಂಡೋಡಿ, ಪಕ್ಷದ ಪ್ರಮುಖರಾದ ರಾಕೇಶ್ ಮೆಟ್ಟಿನಡ್ಕ, ಧಜನಂಜಯ ,ನವೀನ್ ಬಾಳುಗೊಡು,ಹರ್ಷಿತ್ ಕಡ್ತಲಕಜೆ, ಇಂಜಿನಿಯರ್ ಪರಮೇಶ್ವರ, ಗುತ್ತಿಗೆದಾರ ಸತೀಶ್ ಬಪ್ಪಳಿಕೆ, ಹಾಗೂ ಪಕ್ಷದ ಶಕ್ತಿ ಕೇಂದ್ರ ಪ್ರಮುಖರು,ಬೂತ್ ಸಮಿತಿ ಪ್ರಮುಖರು, ಕಾರ್ಯಕರ್ತರು ಹಾಗೂ ಊರವರು ಉಪಸ್ಥಿತರಿದ್ದರು.
