
ಅರಿವು ಕೇಂದ್ರ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮತ್ತು ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ ಗುತ್ತಿಗಾರು ಇದರ ಸಹಯೋಗದೊಂದಿಗೆ ನಡೆಯುತ್ತಿದ್ದ ನವೋದಯ/ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರ 2024-2025 ನೇ ಸಾಲಿನ ವಿದ್ಯಾರ್ಥಿಗಳಾದ ಹಿತೈಷಿ ಎಚ್( ದೇವಚಳ್ಳ ಗ್ರಾಮದ ಚಂದ್ರಹಾಸ ಮತ್ತು ಗಾಯತ್ರಿ ದಂಪತಿಗಳ ಪುತ್ರಿ) ಮತ್ತು ಧೃತಿಕ್ ಯಂ (ದೇವಚಳ್ಳ ಗ್ರಾಮದ ಪುಂಡರೀಕ ಮತ್ತು ಜಯಂತಿ ದಂಪತಿಗಳ ಪುತ್ರ) 6 ನೇ ತರಗತಿಗೆ ಮುಡಿಪು ನವೋದಯ ಶಾಲೆಗೆ ಪ್ರಥಮ ಹಂತದಲ್ಲಿ ಆಯ್ಕೆಯಾಗಿರುತ್ತಾರೆ . ಸತತ ಏಳು ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಾರಂಭವಾದ ತರಬೇತಿ ಕೇಂದ್ರದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸುಮಾರು 30 ವಿದ್ಯಾರ್ಥಿಗಳು ನೋಂದಣಿಗೊಂಡು ಉಚಿತ ತರಬೇತಿ ಪಡೆದು ಆಯ್ಕೆಯಾಗಿರುವುದು ಅರಿವು ಕೇಂದ್ರಕ್ಕೆ ಪ್ರೋತ್ಸಾಹದಾಯಕ ವಿಷಯವಾಗಿದೆ. ಇವರಿಗೆ ಗುತ್ತಿಗಾರು ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಅಭಿಲಾಷ ಮೋಟ್ನೂರು ತರಬೇತಿ ನೀಡಿರುತ್ತಾರೆ.
