
ಬ್ರೈನ್ ಹೆಮರೇಜ್ ನಿಂದ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳ್ಳಾರೆಯಿಂದ ವರದಿಯಾಗಿದೆ. ಬೆಳ್ಳಾರೆ ಗ್ರಾಮದ ಕೊಳಂಬಳ ರುಕ್ಮಯ್ಯ ಶೆಟ್ಟಿಯವರ ಪುತ್ರ ಲೋಕೇಶ್ ಮೃತ ದುರ್ದೈವಿ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕೃಪಾ, ಜ್ಞಾನಗಂಗಾ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ರಿತ್ವಿಕ್, ಮೂರು ವರ್ಷದ ಪುತ್ರಿ ಶರಾಯ , ಚಿಕ್ಕಮ್ಮ ಸೀತಾ, ಸಹೋದರ ರೋಹಿತ್, ಸಹೋದರಿಯರಾದ ಸ್ವಾತಿ, ಸಿಂಚನಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
