
ಸುಳ್ಯ ನಗರ ಪಂಚಾಯತ್ ಸದಸ್ಯ ಸಮಾಜ ಸೇವಕ ಷರೀಫ್ ಕಂಠಿ ಯವರ ಮೇಲೆ ಯಾವುದೋ ದುರುದ್ದೇಶದಿಂದ ಮಹಿಳೆಯೊಬ್ಬರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ವಿಷಯ. ಸುಳ್ಯ ನಗರದ ಸಾರ್ವಜನಿಕರಿಗೆ ಕಂಠಿ ಯವರ ಬಗ್ಗೆ ಅವರ ಸೇವೆಯ ಬಗ್ಗೆ ಗೊತ್ತಿದ್ದು ಮಹಿಳೆಯೊಬ್ಬರು ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿರುವುದನ್ನು ಸುಳ್ಯ ತಾಲೂಕು AIKMCC ತೀವ್ರವಾಗಿ ಖಂಡಿಸುತ್ತದೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹೆಣಗಾಡುತ್ತಿರುವ ಕಾಣದ ಕೈಗಳು ಇದರ ಹಿಂದೆ ಇದ್ದು ಪೊಲೀಸ್ ಇಲಾಖೆ ಇಂತಹ ವ್ಯಕ್ತಿಗಳ ಬಗ್ಗೆ ನಿಗಾವಹಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುಳ್ಯ ತಾಲೂಕು AIKMCC ಅಧ್ಯಕ್ಷರಾದ ಖಲಂದರ್ ಎಲಿಮಲೆ, ಪ್ರದಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
