
ಸುಬ್ರಹ್ಮಣ್ಯ ಮಾ.26: ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಪರಿಸರದ ಪ್ರದೇಶಗಳಲ್ಲಿ ವಿಪರೀತ ತ್ಯಾಜ್ಯ ವಸ್ತುಗಳನ್ನ ಭಕ್ತಾದಿಗಳು ಎಸೆದು ಇಡೀ ನೀರು ಹಾಗೂ ಪರಿಸರ ಮಲಿನಗೊಂಡಿರುತ್ತದೆ. ಶ್ರೀ ದೇವಳದ ವತಿಯಿಂದ ಅಲ್ಲಿಯ ನೌಕರರು ನೀರಿನಿಂದ ಎಷ್ಟೇ ತ್ಯಾಜ್ಯಗಳಾದ ಬಟ್ಟೆ ಬರೆಗಳನ್ನ ತೆಗೆದರೂ ಮತ್ತೆ ಮತ್ತೆ ಭಕ್ತಾದಿಗಳು ನೀರಲ್ಲೇ ಬಟ್ಟೆಗಳನ್ನ ಬಿಡುವ ಚಾಳಿಯನ್ನು ಮುಂದುವರಿಸುತ್ತಿರುವುದು ಕೇದಕರ. ಇದನ್ನು ಗಮನಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಹಾಗೂ ಅಧಿಕಾರಿ ವೃಂದದವರು ಮತ್ತು ಸುಮಾರು 150ಕ್ಕೂ ಮಿಕ್ಕಿ ನೌಕರರು ಸ್ವತಃ ಮಾ.26 ಬುಧವಾರದಂದು ಕುಮಾರ ಸ್ಥಾನಘಟ್ಟದ ಪ್ರದೇಶದಲ್ಲಿ ನೀರಿಗಿಳಿದು ಬಟ್ಟೆ ಬರೆಗಳನ್ನು ಮೇಲಕ್ಕೆ ತಂದರು. ತದನಂತರ ರಾಶಿ ರಾಶಿಯಾಗಿ ಇದ್ದಂತ ಬಟ್ಟೆ ಬರೆಗಳನ್ನು ಗ್ರಾಮ ಪಂಚಾಯಿತಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕೊಂಡೊಯ್ಯಲಾಯಿತು.
