
ಸುಮಾರು 150 ವರ್ಷದಷ್ಟು ಪುರಾತನ ವಾದ ಶ್ರೀ ಧರ್ಮದೈವ ಧೂಮಾವತಿ,ಮೂಕಾಂಬಿಕಾ ಗುಳಿಗ ಮತ್ತು ಸಪರಿವಾರ ದೈವಸ್ಥಾನ ಓಡಬೈ ಇದರ ದೈವಸ್ಥಾನದ ನವೀಕರಣ ಕಾಮಗಾರಿ ನಡೆಯುತ್ತಿದ್ದು ಇದರ ದಾರಂದ ಮೂಹೂರ್ತ ಇಂದು ನಡೆಯಿತು
ಈ ಸಂದರ್ಭದಲ್ಲಿ ಮುಕುಂದ ನಾಯಕ್ ,ಪ್ರೇಮ್ ರಾಜ್ ,ಉಷಾ ಕಿರಣ ,ಸಾತ್ವಿಕ ,ಸೀತಾರಾಮ್ ,ಆಶಾ ನಾಯಕ್ ,ಗುರುಪ್ರಸಾದ್ ಹಾಗೂ ದೈವಸ್ಥಾನದ ಶಿಲ್ಪಿಗಳಾದ ಪದ್ಮನಾಭ ಆಚಾರ್ಯ ಕಡಪಾಲ ಹಾಗೂ ನಾಗೇಶ್ ಮೇಸ್ತ್ರಿ ,ಮತ್ತು ಕುಟುಂಬಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.
ದೈವಸ್ಥಾನದ ನವೀಕರಣ ಪುನಃಪ್ರತಿಷ್ಟ ಬ್ರಹ್ಮಕಲಶ ಕಾರ್ಯಕ್ರಮ ಏಪ್ರಿಲ್ 30 ಮತ್ತು ಮೇ 01 ರಂದು ನಡೆಯಲಿದೆ
ದೈವಗಳಿಗೆ ಮೇ 8 ಮತ್ತು 9ರಂದು ಕೋಲ ನೆರವೇರಲಿದೆ. ಮೂಕಾಂಬಿಕಾ ಗುಳಿಗ ದೈವದ ಅಗ್ನಿಸೇವೆ ವಿಶೇಷ ಆಕರ್ಷಣೆ ಯಾಗಿದ್ದು ಇದರ ವೀಕ್ಷಣೆಗೆ ಸಾವಿರಾರು ಮಂದಿ ಆಗಮಿಸುತ್ತಾರೆ
