
ಸುಳ್ಯ ತಾಲೂಕಿನ ವಿವಿಧೆಡೆ ಭಾರಿ ಗಾಳಿ ಬೀಸಿದ್ದು ಆಲಿಕಲ್ಲು ಸಹಿತ ಮಳೆ ಸುರಿದಿದ್ದು ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಹಲವು ಕಡೆಗಳಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದ್ದು ವಿದ್ಯುತ್ ಕೈಕೊಟ್ಟಿದೆ. ಸುಳ್ಯ ಕೃಷಿ ಇಲಾಖೆಯ ಧ್ವಜಸ್ತಂಭ ಕುಸಿದು ವಿದ್ಯುತ್ ಲೈನ್ ಮೇಲೆ ಬಿದ್ದಿದೆ. 33 ಕೆ.ವಿ.ವಿದ್ಯುತ್ ಲೈನ್ ಗೆ ದೊಡ್ಡೇರಿ ಬಳಿ ಒಣಗಿದ ಮರ ಬಿದ್ದು ಹಾನಿಯಾಗಿದ್ದು ವಿದ್ಯುತ್ ವಿಳಂಬವಾಗುವ ಸಾಧ್ಯತೆ ಇದೆ.
