
ಸುಳ್ಯದಲ್ಲಿ ಇಂದು ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಪೈಚಾರ್ ಜಂಕ್ಷನ್ ನಲ್ಲಿ ರಸ್ತೆ ಯ ಬದಿಯಲ್ಲಿದ್ದ ತೆಂಗಿನ ಮರವೊಂದು 11ಕೆ.ವಿ. ವಿದ್ಯುತ್ ಲೈನ್ ಮೇಲೆ ಬಿದ್ದು ರಸ್ತೆಯ ಕಡೆ ವಾಲಿ ನಿಂತಿದೆ. ಮರ ಬಿದ್ದ ಸಂದರ್ಭ ವಿದ್ಯುತ್ ತಂತಿ ತುಂಡು ಆಗದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ತೆಂಗಿನ ಮರ ಇನ್ನಷ್ಟೇ ತೆರವುಗೊಳ್ಳಬೇಕಿದೆ.
