ಕೊಲ್ಲಮೊಗ್ರು ಗ್ರಾಮದ ಅರಳಿಕಟ್ಟೆಯ ಸಮೀಪದ ಮುಖ್ಯರಸ್ತೆಯಲ್ಲಿ ಕೊಲ್ಲಮೊಗ್ರು ಕಲ್ಮಕಾರು-ಸಂಪರ್ಕ ಸೇತುವೆಗೆ ಗುದ್ದಲಿಪೂಜೆಯು ಮಾ.27ನೇ ಗುರುವಾರದಂದು ನಡೆಯಲಿದ್ದು, ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಇವರು ಗುದ್ದಲಿ ಪೂಜೆ ನೆರವೇರಲಿದ್ದಾರೆ.
ಅಲ್ಲದೆ ಅದೇ ದಿನ ಗಡಿಕಲ್ಲು ಸಮೀಪದ ಪನ್ನೆ ಎಂಬಲ್ಲಿ ರಸ್ತೆ ಸಮೀಪದ ನದಿಗೆ ತಡೆಗೋಡೆ ರಚನೆಗೂ ಗುದ್ದಲಿ ಪೂಜೆ ಸೇರಿದಂತೆ ಕೊಲ್ಲಮೊಗ್ರು ಗ್ರಾಮದಲ್ಲಿ ನಡೆಯುವ ವಿವಿಧ ಕಾಮಗಾರಿ ಕೆಲಸಕ್ಕೂ ಗುದ್ದಲಿಪೂಜೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೊಲ್ಲಮೊಗ್ರು ಬೂತ್ ಸಮಿತಿ ಕಾರ್ಯದರ್ಶಿ ಹರೀಶ್ ಬಳ್ಳಡ್ಕ ತಿಳಿಸಿದ್ದಾರೆ.
- Wednesday
- April 2nd, 2025