Ad Widget

ಅರಂತೋಡಿನಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ – ಗ್ರಾ. ಪಂ. ಮನವಿಗೆ ಶೀಘ್ರ ಸ್ಪಂದಿಸಿದ ಸುಳ್ಯದ ಪಶು ವೈದ್ಯಾಧಿಕಾರಿ ನಿತಿನ್ ಪ್ರಭು

ಆರಂತೋಡಿನ ಮನೆಯೊಂದರ ಕೆಲಸಕ್ಕೆ ಬಂದು ನಾಯಿ ಕಡಿತದಿಂದ ನಾಲ್ಕೈದು ದಿನಗಳ ಹಿಂದೆ ಸಂಪಾಜೆಯ ಗೂನಡ್ಕದಲ್ಲಿ ಮಹಿಳೆಯೊಬ್ಬರು ಮೃತರಾದ ಹಿನ್ನಲೆಯಲ್ಲಿ ಆರಂತೋಡು ಗ್ರಾಮ ಪಂಚಾಯತ್ ಆಡಳಿತ ತಕ್ಷಣ ಕಾರ್ಯಪ್ರವೃತ್ತವಾಗಿ ಸುಳ್ಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ನಿತಿನ್ ಪ್ರಭು ಅವರ ಸಹಕಾರದಿಂದ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯ ಮಾಡಲಾಯಿತು. ಆರಂತೋಡು ಮತ್ತು ತೊಡಕಾನ...

ಸಂವಿಧಾನ ಬದಲಾವಣೆ ಕುರಿತು ಡಿಕೆಶಿ  ಹೇಳಿಕೆಗೆ ಸುಳ್ಯ ಬಿಜೆಪಿ ಖಂಡನೆ – ಕ್ಷಮೆಯಾಚನೆಗೆ ಒತ್ತಾಯ

ಸಂವಿಧಾನ ಬದಲಾವಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಯನ್ನು ಖಂಡಿಸಿ ಸುಳ್ಯ ಬಿಜೆಪಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಡಿಕೆಶಿ ತಮ್ಮ ಹೇಳಿಕೆ ಹಿಂಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.‌ಸಭೆಯಲ್ಲಿ ಮುಖಂಡರಾದ ಪಿ.ಕೆ.ಉಮೇಶ್, ಯುವ...
Ad Widget

ಪೈಚಾರ್: ವಿದ್ಯುತ್ ತಂತಿ ಮೇಲೆ ಬಿದ್ದ ತೆಂಗಿನ ಮರ – ತಪ್ಪಿದ ಸಂಭಾವ್ಯ ಅಪಾಯ

ಸುಳ್ಯದಲ್ಲಿ ಇಂದು ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಪೈಚಾರ್ ಜಂಕ್ಷನ್ ನಲ್ಲಿ ರಸ್ತೆ ಯ ಬದಿಯಲ್ಲಿದ್ದ ತೆಂಗಿನ ಮರವೊಂದು 11ಕೆ.ವಿ. ವಿದ್ಯುತ್ ಲೈನ್  ಮೇಲೆ ಬಿದ್ದು ರಸ್ತೆಯ ಕಡೆ ವಾಲಿ ನಿಂತಿದೆ. ಮರ ಬಿದ್ದ ಸಂದರ್ಭ ವಿದ್ಯುತ್ ತಂತಿ ತುಂಡು ಆಗದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ತೆಂಗಿನ ಮರ ಇನ್ನಷ್ಟೇ ತೆರವುಗೊಳ್ಳಬೇಕಿದೆ.

ಮಿಥುನ್ ಕುಮಾರ್ ಸೋನಾ ರವರಿಗೆ “ಚಂದನ ಪ್ರತಿಭಾ ರತ್ನ ಪ್ರಶಸ್ತಿ”

ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ರವರ ನೇತೃತ್ವದಲ್ಲಿ “ಸಾಹಿತ್ಯ ಮತ್ತು ಸಾಂಸ್ಕೃತಿಕ ಮಹಾ ಸಂಭ್ರಮ-2025” ಕಾರ್ಯಕ್ರಮವು ಮಾ.23 ರಂದು ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಕಿರುತೆರೆ ಹಾಗೂ ಹಿರಿತೆರೆ ರಂಗದ ಸಾಧನೆಯನ್ನು ಗುರುತಿಸಿ 2025ನೇ ಸಾಲಿನ “ಚಂದನ ಪ್ರತಿಭಾ ರತ್ನ ಪ್ರಶಸ್ತಿ” ಯನ್ನು ಯುವ...

ಸುಳ್ಯ : ಭಾರಿ ಗಾಳಿ ಮಳೆ – ಆಲಿಕಲ್ಲು ಸಹಿತ ಮಳೆ – ಕೈಕೊಟ್ಟ ಕರೆಂಟ್

ಸುಳ್ಯ ತಾಲೂಕಿನ ವಿವಿಧೆಡೆ ಭಾರಿ ಗಾಳಿ ಬೀಸಿದ್ದು ಆಲಿಕಲ್ಲು ಸಹಿತ ಮಳೆ ಸುರಿದಿದ್ದು ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಹಲವು ಕಡೆಗಳಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದ್ದು ವಿದ್ಯುತ್ ಕೈಕೊಟ್ಟಿದೆ. ಸುಳ್ಯ ಕೃಷಿ ಇಲಾಖೆಯ ಧ್ವಜಸ್ತಂಭ ಕುಸಿದು ವಿದ್ಯುತ್ ಲೈನ್ ಮೇಲೆ ಬಿದ್ದಿದೆ.  33 ಕೆ.ವಿ.ವಿದ್ಯುತ್ ಲೈನ್ ಗೆ ದೊಡ್ಡೇರಿ ಬಳಿ...

ಬಾಜಿನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ  ದೈವಸ್ಥಾನದ ನೂತನ ಸಮಿತಿ ರಚನೆ  – ಅಧ್ಯಕ್ಷರಾಗಿ ಮೋಹನ್ ಕುಮಾರ್ ಅಡ್ಕಬಳೆ, ಕಾರ್ಯದರ್ಶಿಯಾಗಿ ಸುಂದರ ಬಾಜಿನಡ್ಕ, ಕೋಶಾಧಿಕಾರಿಯಾಗಿ ಕುಸುಮಾಧರ ಬಾಜಿನಡ್ಕ

ಅರಂತೋಡು ಗ್ರಾಮದ ಬಾಜಿನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ನೂತನ ಸಮಿತಿ ರಚನೆಯನ್ನು ಮಾ.23 ರಂದು ಮಾಡಲಾಯಿತು. ನೂತನ  ಅಧ್ಯಕ್ಷರಾಗಿ ಮೋಹನ್ ಕುಮಾರ್ ಅಡ್ಕಬಳೆ, ಉಪಾಧ್ಯಕ್ಷರಾಗಿ ವಾಸುದೇವ ಅಡ್ಕಬಳೆ, ಕಾರ್ಯದರ್ಶಿಯಾಗಿ ಸುಂದರ ಬಾಜಿನಡ್ಕ, ಜತೆ ಕಾರ್ಯದರ್ಶಿಯಾಗಿ ಶಂಕರ ಬಾಜಿನಡ್ಕ, ಕೋಶಾಧಿಕಾರಿಯಾಗಿ ಕುಸುಮಾಧರ ಬಾಜಿನಡ್ಕ, ಆಯ್ಕೆಯಾದರು. ದೈವಸ್ಥಾನ ಆಡಳಿತ ಮೊಕ್ತೇಸರರಾಗಿ ಚೌಕಾರು ಕಟ್ಟಕೋಡಿ ಇವರನ್ನು ಆಯ್ಕೆ...

ಅಡ್ಕಾರು ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥನೆ

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಳೆಯ ಅನುಗ್ರಹಕ್ಕಾಗಿ ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೊಕ್ತೇಸರ ಗುರುರಾಜ್ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಕೊಲ್ಲಮೊಗ್ರು : ಮಾ.27 ರಂದು ನೂತನ ಸೇತುವೆಗೆ ಗುದ್ದಲಿಪೂಜೆ

ಕೊಲ್ಲಮೊಗ್ರು ಗ್ರಾಮದ ಅರಳಿಕಟ್ಟೆಯ ಸಮೀಪದ ಮುಖ್ಯರಸ್ತೆಯಲ್ಲಿ ಕೊಲ್ಲಮೊಗ್ರು ಕಲ್ಮಕಾರು-ಸಂಪರ್ಕ ಸೇತುವೆಗೆ ಗುದ್ದಲಿಪೂಜೆಯು ಮಾ.27ನೇ ಗುರುವಾರದಂದು ನಡೆಯಲಿದ್ದು, ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಇವರು ಗುದ್ದಲಿ ಪೂಜೆ ನೆರವೇರಲಿದ್ದಾರೆ.ಅಲ್ಲದೆ ಅದೇ ದಿನ ಗಡಿಕಲ್ಲು ಸಮೀಪದ ಪನ್ನೆ ಎಂಬಲ್ಲಿ ರಸ್ತೆ ಸಮೀಪದ ನದಿಗೆ ತಡೆಗೋಡೆ ರಚನೆಗೂ ಗುದ್ದಲಿ ಪೂಜೆ ಸೇರಿದಂತೆ ಕೊಲ್ಲಮೊಗ್ರು ಗ್ರಾಮದಲ್ಲಿ ನಡೆಯುವ ವಿವಿಧ ಕಾಮಗಾರಿ...

ಮಾ.26 ರಂದು “ಭಾವ ತೀರ ಯಾನ” ಎರಡು ಶೋ – ಬೆಳಿಗ್ಗೆ 10.45ಕ್ಕೆ ಹಾಗೂ ಸಂಜೆ 7.30 ಕ್ಕೆ ಅವಕಾಶ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 5 ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಾ.26ರಂದು ಬೆಳಿಗ್ಗೆ 10.45ಕ್ಕೆ ಹಾಗೂ ಸಂಜೆ 7.30 ಕ್ಕೆ ಹಾಗೂ ಮಾ.27 ಗುರುವಾರ ಮಧ್ಯಾಹ್ನ 3-30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

ವಳಲಂಬೆ : ದಿ. ದೇವಕಿ ದೇರಪ್ಪಜ್ಜನಮನೆ ಸ್ಮರಣಾರ್ಥ “ಸತ್ಯದ ಸ್ವಾಮಿ ಕೊರಗಜ್ಜ” ಯಕ್ಷಗಾನ ಬಯಲಾಟ ಪ್ರದರ್ಶನ

ಉಡುಪಿಯ ಶ್ರೀ ಪಂಜುರ್ಲಿ ಪ್ರಸಾದಿತ ಯಕ್ಷಗಾನ ಮಂಡಳಿ ಶಾಸ್ತನ ಮೇಳದವರಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಮಾ.24 ರಂದು ದಿ. ದೇವಕಿ ದೇರಪ್ಪಜ್ಜನಮನೆ ಸ್ಮರಣಾರ್ಥ "ಸತ್ಯದ ಸ್ವಾಮಿ ಕೊರಗಜ್ಜ" ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಆರಂಭದಲ್ಲಿ ನಡೆದ ಚೌಕಿ ಪೂಜೆ ನಡೆಯಿತು.‌ ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ವ್ಯವಸ್ಥಾಪನಾ...
Loading posts...

All posts loaded

No more posts

error: Content is protected !!