Ad Widget

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಗೆ ಸದಸ್ಯರ ನೇಮಕ ವಿಚಾರದಲ್ಲಿ ಕಾರ್ಯಕರ್ತರ ಅಸಮಾಧಾನ – ಕಡಬ ಭಾಗದಿಂದ ಪಕ್ಷದ ಕಾರ್ಯಕರ್ತರ ಹೊರತುಪಡಿಸಿ ಅಯ್ಕೆ ಮಾಡಿದ್ದಾರೆಂದು ಆಕ್ರೋಶ – ಕಡಬ ಬ್ಲಾಕ್ ಅಧ್ಯಕ್ಷರು ಹೇಳಿದ್ದೇನು?

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಗೆ ಸದಸ್ಯರ ನೇಮಕವಾಗಿದೆ ಎಂದು ಉಸ್ತುವಾರಿ ಸಚಿವರು ಕಳುಹಿಸಿದ್ದು ಎನ್ನಲಾದ ಪಟ್ಟಿಯೊಂದು ವೈರಲ್ ಆಗುತ್ತಿದ್ದು, ಈ ಪಟ್ಟಿಯಲ್ಲಿ ಕಡಬ ತಾಲೂಕಿನ ಅಜಿತ್ ಕುಮಾರ್‌ ಪೂಜಾರಿ ವಾಲೇರಿ ಗೋಳಿತೊಟ್ಟು ಎಂಬ ಹೆಸರಿದೆ. ಇದರ ಬಗ್ಗೆ ಕಡಬದ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು ಬರಹವೊಂದು ವೈರಲ್ ಆಗುತ್ತಿದೆ. 

. . . . . . . . .

ಈ ಬಗ್ಗೆ ಅಮರ ಸುದ್ದಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಭಿಲಾಷ್ ಪಿ.ಕೆ. ಅವರನ್ನು ಸಂಪರ್ಕಿಸಿದಾಗ ಅವರು ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿದ್ದು ನನಗೆ ತಿಳಿದಂತೆ ಇಲ್ಲ. ಆ ಭಾಗದ ನಾಯಕರಿಗೂ ಪಕ್ಷದ ಪರ ಕೆಲಸ ಮಾಡಿದ ಬಗ್ಗೆ ಗೊತ್ತಿಲ್ಲ. ಅಂತವರನ್ನು ಆಯ್ಕೆ ಮಾಡಿದ್ದಕ್ಕೆ ನಮ್ಮ ನಾಯಕರಿಗೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬರಹವನ್ನು ಇಲ್ಲಿ ಯಥವತ್ತಾಗಿ ಪ್ರಕಟಿಸಲಾಗಿದೆ.‌
“ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಯ ಸದಸ್ಯರ ಪ್ರತಿಯೊಂದು ಉಸ್ತುವಾರಿ ಸಚಿವರು ಕಳುಹಿಸಿದ್ದು ಎನ್ನಲಾದ ಪಟ್ಟಿಯೊಂದು ವೈರಲ್ ಆಗುತ್ತಿದೆ. ಈ ಪಟ್ಟಿಯಲ್ಲಿ ಇರುವ ಕಡಬ ತಾಲೂಕಿನ ಅಜಿತ್ ಕುಮಾರ್‌ ಎಂಬ ವ್ಯಕ್ತಿಯ ಹೆಸರು ಇರುತ್ತದೆ ಈ ವ್ಯಕ್ತಿಯ ಹೆಸರು ಕಡಬ ಕಾಂಗ್ರೆಸ್ಸಿನಲ್ಲಿ ಮೊದಲ ಬಾರಿ ಕೇಳುತ್ತಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತ್ ಗೆ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ಆಂತರಿಕ ವಿಷಯ ಹೊರಗೆ ಬಂದಿರುತ್ತದೆ ಹಾಗೂ ಪಕ್ಷಕ್ಕಾಗಿ ದುಡಿಯದಿರುವ ಹಿಂಬಾಗಿಲಿನಲ್ಲಿ ಬಿಜೆಪಿ ಗೆ ಕೆಲಸ ಮಾಡುವಂತವರಿಗೆ ಪಕ್ಷ ಅವಕಾಶ ಕೊಡುತ್ತಿದೆಯಾ ಎಂಬ ಸಂಶಯ ಪಟ್ಟಿಯನ್ನು ನೋಡಿದಾಗ ಅನಿಸುತ್ತಿದೆ. ಇಂತಹ ಬಿಜೆಪಿಯ ಕಾರ್ಯಕರ್ತನನ್ನು ದೇವಾಲಯದ ಟ್ರಶ್ಟಿಗೆ ಸೂಚಿಸಿದವರ ಮೇಲೆ ಪಕ್ಷ ಕಠಿಣ ನಿರ್ಧಾರ ಕೈಗೊಳ್ಳಬೇಕು ಹಾಗೂ ಅಜಿತ್ ಕುಮಾರ್‌ ಅವರ ಹೆಸರನ್ನು ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯಿಂದ ಹೆಸರು ಹೊರಗಿಡದಿದ್ದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುಣಾವಣೆಯಲ್ಲಿ ಪಕ್ಷಕ್ಕೆ ಮತ ನೀಡಿ ತಟಸ್ಥರಾಗುತ್ತೇವೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಹಾಗೂ ದೇವಾಲಯದಲ್ಲಿ ಒಂದು ಬಾರಿ ಸಮಿತಿ ಸದಸ್ಯರಾದವರಿಗೆ ಅವಕಾಶ ನೀಡದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿಯದಿರುವವರಿಗೆ ಅಧಿಕಾರ ಕೊಟ್ಟಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಾವುಗಳು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜಿನಾಮೆ ಕೊಟ್ಟು ತಟಸ್ಥರಾಗುತ್ತೇವೆ ಎನ್ನುವ ಎಚ್ಚರಿಕೆಯನ್ನು ಕಡಬ ಬ್ಲಾಕ್ ಅಧ್ಯಕ್ಷ ರಿಗೆ ನೀಡುತ್ತಿದ್ದೇವೆ. (ಪಕ್ಷದ ನಿಷ್ಠಾವಂತ ಕಾರ್ಯಕರ್ತರು)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!