
ಸುಬ್ರಹ್ಮಣ್ಯ ಮಾ .21: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಮುಂದಿನ ತಿಂಗಳು ಡಿಸ್ಟ್ರಿಕ್ಟ್ ಗವರ್ನರ್ ವಿಕ್ರಮದತ್ತ ಅವರು ಭೇಟಿ ನೀಡುವ ಸಮಯದಲ್ಲಿ ಪೂರ್ವ ತಯಾರಿ ಹಾಗೂ ಪರಿಶೀಲನೆಗಾಗಿ ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್ ಬೆಳ್ಳಾರೆ ಅವರು ಬುಧವಾರ ಏನೇಕಲ್ಲಿನ ರೈತ ಯುವಕ ಮಂಡಲ ಸಭಾಭವನದಲ್ಲಿ ಕ್ಲಬ್ ಅಸೆಂಬ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ನವರು ಈ ವರ್ಷದ ಆರಂಭದ ಜುಲೈಯಿಂದ ಇಲ್ಲಿವರೆಗೆ ಆದ ಕಾರ್ಯಕ್ರಮಗಳು, ಪದಾಧಿಕಾರಿಗಳ ಜವಾಬ್ದಾರಿಗಳು, ಅಂತರಾಷ್ಟ್ರೀಯ ಸಂಸ್ಥೆಗೆ ಕಳುಹಿಸಿದ ದೇಣಿಗೆಗಳು, ಸಮಾಜ ಸೇವೆಯಲ್ಲಿ ನೀಡಿದ ಮಹತ್ತರ ಕೊಡುಗೆಗಳು, ನಡೆಸಿದ ಹಾಗೂ ಭಾಗವಹಿಸಿದ ತರಬೇತಿಗಳು, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಮುಂತಾದ ದಾಖಲೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜೋನಲ್ ಲಿಫ್ಟಿನೆಂಟ್ ವಿಶ್ವನಾಥ ನಡು ತೋಟ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ಅಗತ್ಯ ದಾಖಲೆಗಳನ್ನು ನೀಡಿದರು. ವೇದಿಕೆಯಲ್ಲಿ ನಿಕಟಪೋರ್ವ ಅಧ್ಯಕ್ಷ ಪ್ರಶಾಂತ್ ಕೋಡಿಬೈಲ್, ಕಾರ್ಯದರ್ಶಿ ಚಿದಾನಂದ ಕುಳ, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ರೋಟೆರಿಯನ್ಸ್ ಆದ ಕಾರ್ಯಪ್ಪ ಗೌಡ ಪುಂಡಿಗದ್ದೆ ಹಾಗೂ ಸುದರ್ಶನ ಶೆಟ್ಟಿ ಶಾರದ ಗಾರ್ಡನ್ ಇವರುಗಳ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಸಭೆಯಲ್ಲಿ ಸುಬ್ರಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳು, ಪೂರ್ವ ಅಸಿಸ್ಟೆಂಟ್ ಗವರ್ನರ್ಗಳು ,ಪೂರ್ವ ಜೋನಲ್ ಲೆಫ್ಟಿನೆಂಟ್ ಗಳು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
