
ಸುಬ್ರಹ್ಮಣ್ಯ ಮಾ.22: ಪಶ್ಚಿಮ ಘಟ್ಟ ಪ್ರದೇಶ ವಿಶಾಲವಾಗಿದ್ದು ದಟ್ಟ ಕಾನನದಿಂದ ಕೂಡಿದ್ದು ಸ್ವಚ್ಛಂದವಾದ ಗಾಳಿ ನಾವು ಪಡೆಯುತ್ತಾ ಇದ್ದೇವೆ. ಬೇಸಿಗೆಯ ಬಿರು ಬಿಸಿಲಿನಲ್ಲಿ ಕೂಡ ಕಾಡುಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸಿ ಜರಿ ತೊರೆಗಳಲ್ಲಿ ಇರುವ ನೀರನ್ನ ಕುಡಿದು ಜೀವಿಸ್ತ ಇದ್ದಾವೆ. ಹೀಗಿರುವಾಗ ರಾಜ್ಯ ಸರಕಾರವು ಪ್ರಾಣಿಗಳಿಗೆ ನೀರು ಕುಡಿಯಲು ಬೇಕಾದಷ್ಟು ನೀರು ಹಾಗೂ ಆಹಾರ ಇಲ್ಲ ಹಾಗೂ ನೀರಿಗಾಗಿ ಆಹಾರಕ್ಕಾಗಿ ನಾಡಿಗೆ ಬರುತ್ತವೆ ಎನ್ನುವ ನೆಪ ಒಡ್ಡಿ ದಟ್ಟವಾದ ಅರಣ್ಯದಲ್ಲಿ ಕೊಳವೆ ಬಾವಿಯನ್ನು ಕೊರೆಯಲು ಹಾಗೂ ಸೋಲಾರ್ ಪಂಪ್ ಅಳವಡಿಸಲು ಮುಂದಾಗಿದೆ. ರಾಜ್ಯ ಅರಣ್ಯ ಮಂತ್ರಿಗಳು ಈಗಾಗಲೇ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಈ ಬಗ್ಗೆ ಆದೇಶವನ್ನು ಕೂಡ ನೀಡಿರುತ್ತಾರೆ. ಹೀಗೆ ಇಂತಹ ದುಸ್ಸಾಹಸಕ್ಕೆ ರಾಜ್ಯ ಸರ್ಕಾರವು ಕೈ ಹಾಕಿದಲ್ಲಿ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯಲು ಜೆಸಿಬಿ ಹಾಗೂ ಲಾರಿಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೊಂಡೊಯ್ಯಲು ಮಾರ್ಗವನ್ನು ರಚಿಸುವುದು ಮಾಡಿದಲ್ಲಿ ತುಂಬಾ ಅರಣ್ಯ ಪ್ರದೇಶವು ಬರಿದಾಗುವ ಹಾಗೂ ಹಾಳಾಗುವ ಅಘಾತಕಾರಿ ಬೆಳವಣಿಗೆ ಕಂಡು ಬರಲಿದೆ. ಆದುದರಿಂದ ರಾಜ್ಯ ಸರ್ಕಾರವು ಈ ಆದೇಶವನ್ನು ಕೂಡಲೇ ಕೈ ಬಿಡಬೇಕೆಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಪಶ್ಚಿಮ ಘಟ್ಟ ದಟ್ಟ ಕಾಡಿನಲ್ಲಿ ಬೇಸಿಗೆಯಲ್ಲಿ ನೀರಿನ ಅಂಶ ಕಡಿಮೆ ಇದೆ, ಆಹಾರ ಕೂಡ ಕ್ಷೀಣಿಸಿದೆ, ಇದರಿಂದಾಗಿ ಕಾಡುಪ್ರಾಣಿಗಳಿಗೆ ನೀರು ಆಹಾರವನ್ನು ಅರಿಸಿಕೊಂಡು ನಾಡಿಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಆದುದರಿಂದ ಕೊಳವೆಬಾವಿ ಕೊರೆದು ಸೋಲಾರ್ ಪಂಪು ಮೂಲಕ ನೀರನ್ನು ಶೇಖರಿಸಿ ವನ್ಯಜೀವಿಗಳಿಗೆ ಜೀವಿಸಲು ಅನುಕೂಲ ಮಾಡಿಕೊಡಬೇಕೆಂದು ಅರಣ್ಯ ಮಂತ್ರಿಗಳು ಅರಣ್ಯ ಇಲಾಖೆಗೆ ನೀಡಿದ ಆದೇಶವು ಅವೈಜ್ಞಾನಿಕವಾಗಿದ್ದು, ಇದರಿಂದಾಗಿ ಪಶ್ಚಿಮಘಟ್ಟ ಪ್ರದೇಶವೇ ಸಂಪೂರ್ಣ ಹಾಳಾಗಲಿದ್ದು ,ಅಲ್ಲದೆ ಭ್ರಷ್ಟಾಚಾರಕ್ಕೂ ಎಡೆ ಮಾಡಿಕೊಡುತ್ತದೆ ಎಂದು ಕಿಶೋರ್ ಶಿರಾಡಿ ದೂರಿರುತ್ತಾರೆ.
ಸುದ್ದಿಗೋಷ್ಠಿಯಲ್ಲಿ ಮಾಲೆನಾಡು ಜನ ಹಿತ ರಕ್ಷಣಾ ವೇದಿಕೆ ಸದಸ್ಯರುಗಳಾದ ಅತ್ಯುತ್ತ ಗೌಡ ಸುಬ್ರಹ್ಮಣ್ಯ ,ಅಶೋಕ್ ಕುಮಾರ್ ಮೂಲೆಮಜಲು, ಜಯಪ್ರಕಾಶ್ ಕೂಜುಗೋಡು, ಚಂದ್ರಶೇಖರ ಬಾಳುಗೋಡು, ಚಂದ್ರಹಾಸ ಶಿವಾಲ, ರಮಾನಂದ ಎಣ್ಣೆ ಮಜಲು, ರಾಜೇಶ್ ಕೊಣಜೆ ,ಹಾಗೂ ದುಶ್ಚಂತ್ ಉಪಸ್ಥಿತರಿದ್ದರು.
