

ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ಬಳಿ ರಕ್ಷಿತಾರಣ್ಯದಲ್ಲಿ ಆನೆಯೊಂದು ಸತ್ತು ಕೊಳೆತ ಸ್ಥಿತಿಯಲ್ಲಿ ಮಾ.21ರಂದು ಪತ್ತೆಯಾಗಿದ್ದು, ಸಹಜವಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ವಯಸ್ಸಾಗಿರುವ ಆನೆಯಾಗಿದ್ದು ಕಲ್ಲಿನ ಎಡೆಯಲ್ಲಿ ಕಾಲು ಸಿಲುಕಿ ಸಾವು ಸಂಭವಿಸಿರಬುದು. ಮೂರು ನಾಲ್ಕು ದಿನಗಳ ಹಿಂದೆ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

.