Ad Widget

ಸುಳ್ಯ :ವಿಶ್ವ ಜಲದಿನ ಅಂಗವಾಗಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜೀವನದಿ ಪಯಸ್ವಿನಿಗೆ ಆರತಿ ಕಾರ್ಯಕ್ರಮ

ವಿಶ್ವ ಜಲ ದಿನದ ಅಂಗವಾಗಿ ಕರ್ನಾಟಕದ ಜೀವನಾಡಿ ಕಾವೇರಿ ಮಾತೆಗೆ ನಮನ ಸಲ್ಲಿಸುವ ಕಾರ್ಯಕ್ರಮ ಕಾವೇರಿ ಆರತಿ ಇಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ಭಾಗಮಂಡಲದ ತಲ ಕಾವೇರಿ ಯಲ್ಲಿ ಪೂಜೆ ಸಲ್ಲಿಸಿ ಸಂಜೆ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಆವರಣದಲ್ಲಿ ಕಾವೇರಿ ಆರತಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆಯವರ ನೇತೃತ್ವದಲ್ಲಿ ಸುಳ್ಯದ ಜೀವನದಿ ಪಯಸ್ವಿನಿಗೆ ಪಯಸ್ವಿನಿ ಆರತಿ ಕಾರ್ಯಕ್ರಮವನ್ನು ಪುರೋಹಿತರ ಮೂಲಕ ಧಾರ್ಮಿಕ ವಿಧಿವಿಧಾನ ನಡೆಸಿ ಪಯಸ್ವಿನಿ ನದಿಗೆ ಬಾಗಿನ ಅರ್ಪಣೆ, ಮಂಗಳಾರತಿ ಬೆಳಗಿಸಿ, ಜೀವ ಜಲ ನೀಡುವ ಪಯಸ್ವಿನಿ ಮಾತೆಗೆ ನಮನ ಸಲ್ಲಿಸುವ ಮೂಲಕ ನಡೆಸಲಾಯಿತು. ಸುಳ್ಯದ ಎಲ್ಲಾ ಜನತೆ ಕುಡಿಯುವ ನೀರಿಗೆ, ಉತ್ತಮ ಮಳೆ ಬೆಳೆ ಆಗುವ ಮೂಲಕ ಸಮೃದ್ಧಿ ಯಾಗುವಂತೆ ಪ್ರಾರ್ಥಿಸಲಾಯಿತು. ವಿಶೇಷ ವಾಗಿ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೌಹಾರ್ದ ಯುತವಾಗಿ ಕಾರ್ಯಕ್ರಮ ನಡೆಯಿತು.

. . . . . . . . .

ನಾಗಪಟ್ಟಣ ದೇವಸ್ಥಾನದ ಅರ್ಚಕ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಮಾಜಿ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಎಂ ಹೆಚ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಶೋಕ್ ಎಡಮಲೆ ಹಾಗೂ ಪ್ರಮುಖರಾದ ಧರ್ಮಪಾಲ ಕೊಯಿಂಗಾಜೆ, ಸತ್ಯಕುಮಾರ್ ಅಡಿಂಜ, ರಾಜು ಪಂಡಿತ್, ಡೇವಿಡ್ ಧೀರಾ ಕ್ರಾಸ್ತ, ರಿಯಾಜ್ ಕಟ್ಟೆಕ್ಕಾರ್, ಶರೀಪ್ ಕಂಠಿ, ಸಿದ್ದಿಕ್ ಕೊಕ್ಕೊ, ಮೂಸಾ ಕುಂಜಿ ಪೈಂಬೆಚ್ಚಾಲ್, ಜಯಪ್ರಕಾಶ್ ನೆಕ್ರಪ್ಪಾಡಿ, ರಾಧಾಕೃಷ್ಣ ಪಾರಿವಾರಕಾನ, ನಂದರಾಜ್ ಸಂಕೇಶ್, ಭೋಜಪ್ಪ ನಾಯ್ಕ ವಿನೋಭಾನಗರ, ಕರುಣಾಕರ ಪಳ್ಳತಡ್ಕ, ರಂಜಿತ್ ರೈ ಮೇನಾಲ, ವಿಷ್ಣು ಪ್ರಸಾದ್ ಕೆದಿಲಾಯ, ಚಂದ್ರನ್ ಕೂಟೇಲು, ಬಾಲಸುಬ್ರಹ್ಮಣ್ಯ ಮೊಂಟಡ್ಕ, ಮಧುಸೂಧನ್ ಬೂಡು, ಸುವಿನ್ ಕುಕ್ಕುಜಡ್ಕ, ಶರವಣ ಬೇಂಗಮಲೆ, ಮಹೇಶ್ ಬೆಳ್ಳಾರ್ಕರ್, ಪ್ರಕಾಶ್ ಪಾತೆಟ್ಟಿ, ಗಣೇಶ್ ನಾಗಪಟ್ಟಣ, ಎಂ ಕೆ ಸತೀಶ್, ಅರುಣಾಚಲಂ ಕೂಟೆಲು, ರಕ್ಷಿತ್ ದೊಡ್ಡಡ್ಕ, ಪ್ರೇಮ ಹರೀಶ್ವರನ್ ಗಾಂಧಿ, ಮಂಜುನಾಥ್ ಮಡ್ತಿಲ, ಪಕ್ಕೀರೇಶ್ ಜಯನಗರ, ಶರವಣ ಕುಮಾರ್ ಮೇದಿನಡ್ಕ, ದೀಪಕ್ ರೈ, ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!