
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ” ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಹೌಸ್ ಫುಲ್ ಪ್ರದರ್ಶನದೊಂದಿಗೆ 5 ನೇ ವಾರಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಇಂದು ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಸಂಭ್ರಮಾಚರಣೆ ನಡೆಯಿತು. ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ್ ಅಂಬೆಕಲ್ಲು, ನಟ ತೇಜಸ್ ಕಿರಣ್,ಸಂದೀಪ್ ರಾಜಗೋಪಾಲ್, ನಟಿ ಅರೋಹಿ ನೈನಾ, ಶಾಖಾಹಾರಿ ಚಿತ್ರದ ನಿರ್ಮಾಪಕ ರಾಜೇಶ್ ಕೀಳಂಬಿ, ತುಳು ಚಿತ್ರರಂಗದ ನವೀನ್ ಡಿ.ಪಡೀಲ್ ,ಮೈಮ್ ರಾಮದಾಸ್,ವಿಸ್ಮಯ ವಿನಾಯಕ, ವಸಂತ ಲಕ್ಷ್ಮೀ, ಪ್ರಮುಖರಾದ ಜಾಕೆ ಮಾಧವ ಗೌಡ, ಎಂ.ಬಿ.ಸದಾಶಿವ, ಉಜ್ವಲ್ ಊರುಬೈಲು, ಆಶಾ ತಿಮ್ಮಪ್ಪ, ಕಾವು ಹೇಮನಾಥ್ ಶೆಟ್ಟಿ ಜಯಂತ ನಡುಬೈಲು, ಶಕುಂತಲಾ ಶೆಟ್ಟಿ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು. ಚಿತ್ರ ನಿರ್ಮಾಕರಾದ ಶೈಲೇಶ್ ಅಂಬೆಕಲ್ಲು ವಂದಿಸಿದರು.
ಮಾ.22 ರಂದು ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
