Ad Widget

ಮಡಪ್ಪಾಡಿ ಸಹಕಾರಿ ಸಂಘದ ಆಶ್ರಯದಲ್ಲಿ ಕೃಷಿ ಮಾಹಿತಿ ಕಾರ್ಯಾಗಾರ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಮಾ.20 ರಂದು ಕೃಷಿ ಮಾಹಿತಿ ಕಾರ್ಯಾಗಾರ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿಕರಾದ ಯತೀಶ್ ಗೋಳ್ಯಾಡಿ ನೇರವೇರಿಸಿದರು. ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಅಧ್ಯಕ್ಷತೆ ವಹಿಸಿದ್ದರು.

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಹಾಗೂ ಭೂಮಿಯ ಫಲವತ್ತತೆಯ ಸಂವರ್ಧನೆ ಗೋ ನಂದಾಜಲ ತಯಾರಿಯ ಕುರಿತಾಗಿ ಕೃಷಿಕರಾದ ಪ್ರವೀಣ ಸರಳಾಯ, ಉಪಬೆಳೆಯಾಗಿ ಕಾಳುಮೆಣಸು, ಜಾಯಿಕಾಯಿ ಬೆಳೆಯುವ ವಿಧಾನ ಕುರಿತಾಗಿ ಕೃಷಿಕರಾದ ಟಿ.ಆರ್.ಸುರೇಶ್ಚಂದ್ರ, ತೊಟ್ಟೆತ್ತೋಡಿ ಕಲ್ಮಡ್ಕ, ತಾಳೆ ಕೃಷಿ ಮತ್ತು ಅಡಿಕೆ ಜೊತೆ ಉಪಬೆಳೆಯಾಗಿ ಕಾಫಿ ಕೃಷಿ ಬಗ್ಗೆ ಕೃಷಿಕ ನಿತಿನ್ ಪೂಂಬಾಡಿ ಮಾಹಿತಿ ನೀಡಿದರು.‌

ಈ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಉಷಾ ಜಯರಾಮ, ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಪಿ.ಸಿ.ಜಯರಾಮ್, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸಹಕಾರಿ ಸಂಘದ ಉಪಾಧ್ಯಕ್ಷ ಸಚಿನ್ ಬಳ್ಳಡ್ಕ , ಸಿಇಓ ಪ್ರಶಾಂತ್ ಪೂಂಬಾಡಿ, ಸಂಘದ ನಿರ್ದೇಶಕರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ