
ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿಯಾಗಿ ಅಧಿಕಾರವಹಿಸಿಕೊಂಡ ಡಾ.ಬಿ.ಸಿ.ಭಗವಾನ್ ಅವರನ್ನು ಕೆ.ವಿ.ಜಿ. ದಂತ ಮಹಾವಿದ್ಯಾಲಯ ಸುಳ್ಯದ ವತಿಯಿಂದ ಬೆಂಗಳೂರಿನಲ್ಲಿರುವ ಉಪಕುಲಪತಿಗಳ ಕಛೇರಿಯಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಕಮಿಟಿ”ಬಿ” ಸುಳ್ಯ ಇದರ ಚೇರ್‌ಮೆನ್ ಡಾ.ರೇಣುಕಾ ಪ್ರಸಾದ್ ಕೆ.ವಿ, ನಿರ್ದೇಶಕಿ ಡಾ.ಅಭಿಜ್ಞಾ ಕೆ.ಆರ್ ಮುಖ್ಯ ಕಾರ್ಯನಿರ್ವವಣಾಧಿಕಾರಿ ಡಾ.ಉಜ್ವಲ್ ಯು.ಜೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಮೋಕ್ಷ ನಾಯಕ್, ಪ್ರಾಧ್ಯಾಪಕರಾದ ಡಾ.ಮನೋಜ್ ಕುಮಾರ್ ಅಡ್ಡಂತಡ್ಕ, ಆಡಳಿತಾಧಿಕಾರಿ ಬಿ.ಟಿ, ಮಾಧವ ಉಪಸ್ಥಿತರಿದ್ದರು.
ಡಾ.ಬಿ.ಸಿ.ಭಗವಾನ್ ರವರು ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಅಧೀನ ಸಂಸ್ಥೆಯಾಗಿರುವ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.
