
ಹೌಸ್ ಫುಲ್ ಪ್ರದರ್ಶನದೊಂದಿಗೆ ತಿಂಗಳು ಪೂರೈಸಿದ “ಭಾವ ತೀರ ಯಾನ ” ಮಾ. 21ರಂದು ಶುಕ್ರವಾರ ಸಂಜೆ 4.00 ಗಂಟೆಗೆ ಪುತ್ತೂರಿನ ಭಾರತ್ ಮಾಲ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರ 5 ನೇ ವಾರಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಚಿತ್ರತಂಡದ ನಾಯಕ, ನಾಯಕಿಯರೂ ಸೇರಿದಂತೆ ಇಡೀ ಚಿತ್ರ ತಂಡವೇ ಪುತ್ತೂರಿಗೆ ಆಗಮಿಸಲಿದೆ. ಜತೆಗೆ ತುಳು ಚಿತ್ರರಂಗದ ಖ್ಯಾತನಟರಾದ ನವೀನ್ ಡಿ ಪಡೀಲ್, ಮೈಮ್ ರಾಮದಾಸ್, ಸುಂದರ ರೈ ಮಂದಾರ, ಜಿ.ಎಲ್.ಸಮೂಹ ಸಂಸ್ಥೆಯ ಮಾಲಕ ಬಲರಾಮ್ ಆಚಾರ್ಯ, ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಮಾ.21 ರಂದು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಪ್ರೇಮಿಗಳು ಆಗಮಿಸುವ ಹಿನ್ನೆಲೆಯಲ್ಲಿ Book My Show App ನಲ್ಲಿ ticket ಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
