
ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವವು ಮಾ 15 ರಿಂದ ಆರಂಭಗೊಂಡು ವಿಜ್ರಂಭಣೆಯಿಂದ ನಡೆಯುತ್ತಿದೆ. ಮಾ.15 ರಂದು ಹಸಿರುವಾಣಿ ಮೆರವಣಿಗೆ , ಕಲವರ ನಿರಕ್ಕಲ್ (ಉಗ್ರಾಣ ತುಂಬುವುದು), ರಾತ್ರಿ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಗಳಿಗೆ ಕೂಡುವುದು, ಶ್ರೀ ಕೊರ್ತಿಯಮ್ಮನ ಕೋಲಗಳು, ಶ್ರೀ ಪೊಟ್ಟನ್ ದೈವದ ಕೋಲ ನಡೆಯಿತು.
ಮಾ. 16 ರಂದು ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವ, ಶ್ರೀ ಚಾಮುಂಡಿಯಮ್ಮ, ಶ್ರೀ ಗುಳಿಗದೈವ , ಸಂಜೆ ಕೈವೀದ್ ನಂತರ ಶ್ರೀ ವಯನಾಟ್ ಕುಲವನ್ ಹಾಗೂ ಸಪರಿವಾರ ದೈವಗಳ ನೇಮೋತ್ಸವ ನಡೆಯಿತು.
ಮಾ 17 ರಂದು ಅಪರಾಹ್ನ ಶ್ರೀ ಕಾರ್ನವನ್ ದೈವದ ವೆಳ್ಳಾಟಂ, ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ, ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ನಂತರ ಬಪ್ಪಿಡಲ್, ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕೂಡುವುದು. ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಿತು.
ಮಾ.18 ರಂದು ಬೆಳಿಗ್ಗೆ ಶ್ರೀ ಕಾರ್ನವನ್ ದೈವ, ಶ್ರೀ ಕೊರಚ್ಚನ್ ದೈವ, ಶ್ರೀ ಕಂಡನಾರ್ ಕೇಳನ್ ದೈವ , ಸಂಜೆ ಶ್ರೀ ವಯನಾಟ್ ಕುಲವನ್ ದೈವ ಸೂಟೆ ಸಮರ್ಪಣೆ, ನಂತರ ಶ್ರೀ ವಿಷ್ಣುಮೂರ್ತಿ ದೈವ, ರಾತ್ರಿ ಮರ ಪಿಳರ್ಕಲ್ ನಂತರ ಕೈವಿದ್ ನೊಂದಿಗೆ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಸಂಪನ್ನಗೊಳ್ಳಲಿದೆ. (ಚಿತ್ರ : ಅವಿನ್ ಬೆಟ್ಟಂಪಾಡಿ)
