

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಮಾ.20 ರಂದು ಕೃಷಿ ಮಾಹಿತಿ ಕಾರ್ಯಾಗಾರ ಯುವಕ ಮಂಡಲ ಸಭಾಭವನ ಮಡಪ್ಪಾಡಿ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದ ಉದ್ಘಾಟನೆಯನ್ನು ಕೃಷಿಕರಾದ ಯತೀಶ್ ಗೋಳ್ಯಾಡಿ ನೇರವೇರಿಸಲಿದ್ದು, ಸಂಘದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಅಧ್ಯಕ್ಷತೆ ವಹಿಸಲಿದ್ದಾರೆ. ಮಡಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಉಷಾ ಜಯರಾಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಹಾಗೂ ಭೂಮಿಯ ಫಲವತ್ತತೆಯ ಸಂವರ್ಧನೆ ಗೋ ನಂದಾಜಲ ತಯಾರಿಯ ಕುರಿತಾಗಿ ಕೃಷಿಕರಾದ ಪ್ರವೀಣ ಸರಳಾಯ, ಉಪಬೆಳೆಯಾಗಿ ಕಾಳುಮೆಣಸು, ಜಾಯಿಕಾಯಿ ಬೆಳೆಯುವ ವಿಧಾನ ಕುರಿತಾಗಿ ಕೃಷಿಕರಾದ ಟಿ.ಆರ್.ಸುರೇಶ್ಚಂದ್ರ, ತೊಟ್ಟೆತ್ತೋಡಿ ಕಲ್ಮಡ್ಕ, ತಾಳೆ ಕೃಷಿ ಮತ್ತು ಅಡಿಕೆ ಜೊತೆ ಉಪಬೆಳೆಯಾಗಿ ಕಾಫಿ ಕೃಷಿ ಬಗ್ಗೆ ಕೃಷಿಕ ನಿತಿನ್ ಪೂಂಬಾಡಿ ಮಾಹಿತಿಯನ್ನು ನೀಡಲಿದ್ದಾರೆ. ಗ್ರಾಮ ಎಲ್ಲಾ ಕೃಷಿಕ ಬಂಧುಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಸಂಘದ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು ವಿನಂತಿಸಿದ್ದಾರೆ.
