
ದಕ್ಷಿಣ ಕನ್ನಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ಮಾ.13 ಹಾಗೂ 14 ರಂದು ನಡೆದ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸುಳ್ಯ ತಾಲೂಕು ಸರ್ಕಾರಿ ನೌಕರರ ಸಂಘದ ಸದಸ್ಯರುಗಳು ಭಾಗವಹಿಸಿ 29 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಮಾ.13 ರಂದು ನಡೆದ ಕ್ರೀಡಾಕೂಟದಲ್ಲಿ ಕಂದಾಯ ಇಲಾಖೆಯ ವಿಪಿನ್.ಎಂ ರವರು 4400 ಮೀಟರ್ ರಿಲೇ ಯಲ್ಲಿ, ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಮಣಿಕಂಠರವರು ಈಟಿ ಎಸೆತದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಳಿನಾಕ್ಷಿ.ಬಿ ರವರು ನಾಲ್ಕು ವಿಭಾಗಗಳ ಯೋಗಾಸನ ಸ್ಪರ್ಧೆಯಲ್ಲಿ, ಶೀಲಾವತಿ.ಕೆ.ಎನ್ ಹಾಗೂ ಇಂದಿರಾವತಿ ರವರು ಟೆನ್ನಿಕಾಯ್ಟ್ ಡಬಲ್ಸ್ ನಲ್ಲಿ, ಸುಜಯಾ.ಬಿ.ಡಿ ರವರು ಗುಂಡು ಎಸೆತದಲ್ಲಿ, ರೇಷ್ಮಾ.ಪಿ ರವರು 4100 ಮೀಟರ್ ರಿಲೇ, ಸನತ್.ಪಿ.ಎನ್ ಹಾಗೂ ತಶ್ವಿನಿ ರವರು ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಪಶು ಸಂಗೋಪನಾ ಇಲಾಖೆಯ ರೋಹಿತ್.ಕೆ.ಎ ರವರು 1,500 ಮೀಟರ್, 4100 ಓಟಗಳು ಮತ್ತು 4400 ಮೀಟರ್ ರಿಲೇ ಯಲ್ಲಿ, ಕಂದಾಯ ಇಲಾಖೆಯ ವಿಪಿನ್.ಎಂ ರವರು 800 ಮೀಟರ್ ಓಟ ಮತ್ತು 4*100 ಮೀಟರ್ ರಿಲೇ ಯಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸನತ್.ಪಿ.ಎನ್ ರವರು 110 ಮೀಟರ್ ಅಡೆತಡೆ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ.
ಪಶುಸಂಗೋಪನಾ ಇಲಾಖೆಯ ರೋಹಿತ್.ಕೆ ರವರು 200 ಮೀಟರ್ ಓಟದಲ್ಲಿ, ಕಂದಾಯ ಇಲಾಖೆಯ ವಿಪಿನ್.ಎಂ ರವರು 400 ಮೀಟರ್ ಓಟದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೇವರಾಜ್.ಎಸ್.ಕೆ ರವರು 400 ಮೀಟರ್ ಓಟದಲ್ಲಿ, ನಳಿನಾಕ್ಷಿ.ಬಿ ರವರು ಯೋಗಾಸನ ಹಾಗೂ ರೇಷ್ಮಾ.ಪಿ ರವರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ಸ್ಪರ್ಧೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪೂರ್ಣಿಮಾ.ಎಂ ರವರು ಒಂದು ಚಿನ್ನದ ಪದಕ, ಒಂದು ಬೆಳ್ಳಿಯ ಪದಕ ಹಾಗೂ ಜಯಶೀಲ.ಕೆ ರವರು ಒಂದು ಬೆಳ್ಳಿಯ ಪದಕಗಳನ್ನು ಪಡೆದುಕೊಂಡಿದ್ದಾರೆ.
ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಡಾ| ನಿತಿನ್ ಪ್ರಭು ಅಭಿನಂದಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)
