
ಸುಬ್ರಹ್ಮಣ್ಯ ಮಾ.15 : ನಿಟ್ಟೆ ಜಸ್ಟಿಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನೇರಳಕಟ್ಟೆ ಮಂಗಳೂರು ಇವರು ಸುಬ್ರಹ್ಮಣ್ಯದ ಸದಾನಂದ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಕೇಂದ್ರ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್, ಇನ್ನರ್ವಿಲ್ ಕ್ಲಬ್, ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಹಾಗೂ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆಯಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆಗೊಂಡಿತು.

ಶಿಬಿರದ ಅಧ್ಯಕ್ಷತೆಯನ್ನು ನಿಟ್ಟೆ ಯುನಿವರ್ಸಿಟಿಯ ಉಪಾಧ್ಯಕ್ಷರಾದ ಡಾ.ಸತೀಶ್ ಭಂಡಾರಿ ವಹಿಸಿದ್ದರು.
ಶಿಬಿರದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಮಠದ ಆಡಳಿತ ಅಧಿಕಾರಿ ಸುದರ್ಶನ ಜೋಯಿಶ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ “ಇಂದು ನಾವು ದಿನನಿತ್ಯ ಸೇವಿಸುವ ಆಹಾರದಿಂದಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದು ಸಾಮಾನ್ಯವಾಗಿದೆ. ನಾವು ಉತ್ತಮವಾದ ಹಾಗೂ ಪರಿಮಿತವಾದ ಆಹಾರವನ್ನು ಸೇವಿಸಿದಾಗ ಮಾತ್ರ ನಮ್ಮ ಆರೋಗ್ಯ ಸ್ಥಿತಿಯು ಕೂಡ ಸುಧಾರಿಸಿಕೊಳ್ಳುತ್ತದೆ. ಆನಿಟ್ಟಿನಲ್ಲಿ ಪ್ರತಿಯೊಬ್ಬರು ಆಹಾರ ಸೇವನೆಯಲ್ಲಿ ಹೆಚ್ಚಿನ ಗಮನ ಹರಿಸಿ, ಆರೋಗ್ಯದಲ್ಲಿ ಆಗುವ ತೊಂದರೆಗಳನ್ನ ನಿಭಾಯಿಸಿಕೊಂಡು ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಕೊಂಡು ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು” ಎಂದು ನುಡಿದರು.ವೇದಿಕೆಯಲ್ಲಿ ನಿಟ್ಟೆ ದೇರಳಕಟ್ಟೆ ಕ್ಷೇಮದ ರೂರಲ್ ಹೆಲ್ತ್ ಸೆಂಟರ್ ಕೋ ಆರ್ಡಿನೇಟರ್ ಮೇಜರ್ ಡಾ| ರಾಘವೇಂದ್ರ ಹುಚ್ಚಣ್ಣನವರ್, ಸ್ಕಿನ್ ಸ್ಪೆಷಲಿಸ್ಟ್ ಡಾl ಗಿರೀಶ್, ಫಿಜಿಷಿಯನ್ ಚೇತನ್ ಸುಬ್ರಮಣ್ಯ, ಇ&ಟಿ ಸರ್ಜನ್ ಡಾl ವಾದೀಶ್ ಭಟ್, ಆಪ್ತಮಜಾಲಿಸ್ಟ್ ಡಾl ವೈಶಾಖ ಶೆಟ್ಟಿ, ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ವಿಕ್ರಮಶೆಟ್ಟಿ, ದಂತ ವೈದ್ಯಾಧಿಕಾರಿ ಡಾ| ಚರಣ್ ಶೆಟ್ಟಿ, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಪ್ರೊ ರಂಗಯ್ಯ ಶೆಟ್ಟಿಗಾರ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಇನ್ನರ್ ವೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ವಿಮಲಾ ರಂಗಯ್ಯ ,ರವಿ ಕಕ್ಕೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಾ| ರವಿ ಕಕ್ಕೆಪದವು ಉಪಸ್ಥಿತರಿದ್ದರು.

ವಿದ್ಯಾರ್ಥಿ ಆದ್ಯಶ್ರೀ ಪ್ರಾರ್ಥಿಸಿದರು. ವಿಮಲ ರಂಗಯ್ಯ ಸ್ವಾಗತಿಸಿದರು. ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಸದಾನಂದ ಆಸ್ಪತ್ರೆಯ ಸಿಬ್ಬಂದಿ ಮೋಹನ ಪಳ್ಳಿಗದ್ದೆ ಧನ್ಯವಾದ ಸಮರ್ಪಿಸಿದರು.
ಶಿಬಿರದಲ್ಲಿ ಸುಮಾರು 200ಕ್ಕೂ ಮಿಕ್ಕಿ ಸುಬ್ರಹ್ಮಣ್ಯ ಆಸುಪಾಸಿನ ಊರುಗಳಿಂದ ಬಂದ ಫಲಾನುಭವಿಗಳು ಕಿವಿ, ಮೂಗು ಗಂಟಲು ಪರೀಕ್ಷೆ, ಚರ್ಮರೋಗ ಪರೀಕ್ಷೆ, ಸ್ತ್ರೀರೋಗ ಪರೀಕ್ಷೆ, ದಂತ ಪರೀಕ್ಷೆ, ಬಿಪಿ, ಶುಗರ್, ರಕ್ತ ಪರೀಕ್ಷೆ ಹಾಗೂ ಸಾಮಾನ್ಯ ರೋಗಗಳ ಪರೀಕ್ಷೆಗಳನ್ನ ಉಚಿತವಾಗಿ ನಿಟ್ಟೆ ಆಸ್ಪತ್ರೆಯ ಹಿರಿಯ ವೈದ್ಯರುಗಳಿಂದ ಪಡೆದು ಅಗತ್ಯವಿದ್ದ ಔಷಧಿಗಳನ್ನು ಕೂಡ ಉಚಿತವಾಗಿ ಪಡೆದುಕೊಂಡರು.
