
ಸುಳ್ಯ ನಗರ ಯೋಜನಾ ಪ್ರಾಧಿಕಾರದ ಪ್ರಪ್ರಥಮ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಂ.ಮುಸ್ತಫ ಅವರನ್ನು ಸರಕಾರ ನೇಮಿಸಿದೆ. ಸುಳ್ಯ ನಗರ ಪಂಚಾಯತ್ ಸದಸ್ಯರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಗರದ ಅಭಿವೃದ್ಧಿಗಾಗಿ ಯೋಜನಾ ಪ್ರಾಧಿಕಾರ ರಚನೆ ಆಗುವಲ್ಲಿ ಶ್ರಮಿಸಿದ್ದರು. ಮಾ. 17 ರಂದು ನಗರ ಪಂಚಾಯತ್ ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
