- Tuesday
- April 1st, 2025

ಹರಿಹರ ಪಳ್ಳತ್ತಡ್ಕ ಗ್ರಾಮದ ದೇವರುಳಿಯ ಎಂಬಲ್ಲಿನ ಪುಂಡರೀಶ ಎಂಬುವವರ ತೋಟಕ್ಕೆ ಹಾಗೂ ಅವರ ತೋಟದ ಅಕ್ಕಪಕ್ಕದ ತೋಟಗಳಿಗೆ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಆನೆ ದಾಳಿ ಮಾಡುತ್ತಿದ್ದು, ಆನೆ ದಾಳಿಯಿಂದ ತೋಟದಲ್ಲಿ ಬೆಳೆದ ಕಂಗು, ತೆಂಗು, ಬಾಳೆ ಕೃಷಿಗೆ ಅಪಾರ ಹಾನಿಯುಂಟಾಗಿದೆ ಎಂದು ತಿಳಿದುಬಂದಿದೆ.

ವಿಷಮುಕ್ತ ಗಾಳಿ, ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ಸಾಮೂಹಿಕ 1,11,108 ವಿಷ್ಣು ಸಹಸ್ರನಾಮ ಪಾರಾಯಣ, ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು, ನಂದಿ ಪೂಜೆ, ಗೋಕಥೆ, ಮನೆಮನೆಯಲ್ಲಿ ಗೋವು, ದೇಶಿ ಗೋಮಾತೆಯ ಮಹಿಮೆ ಜನರಿಗೆ ತಿಳಿಸುವುದು, ದೇಶಿ ಗೋಮಾತೆ ಹಾಗೂ ಭೂಮಾತೆಗೆ ಇರುವ ಸಂಬಂಧ ಜನರಿಗೆ ತಿಳಿಸುವುದು, ಗೋಮಾತೆ...

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಹಾಗೂ ತ್ಯಾಜ್ಯ ವಿಲೇವಾರಿ ವಾಹನದ ಹಸ್ತಾಂತರ ಕಾರ್ಯಕ್ರಮವು ಮಾ.12 ರಂದು ನಡೆಯಿತು.ಕೀರ್ತಿ ಸಂಜೀವಿನಿ ಒಕ್ಕೂಟದ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯನಿರ್ವಹಿಸಲಿದೆ. ಘಟಕವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಕಟ್ಟ ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಮಾಧವ ಚಾಂತಾಳ, ಸದಸ್ಯರುಗಳಾದ...

ಸುಬ್ರಹ್ಮಣ್ಯ ಮಾ.15: ಖ್ಯಾತ ನೃತ್ಯ ಸಂಯೋಜಕ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ನಟರಾದ ಪ್ರಭುದೇವ ಅವರು ಕುಟುಂಬ ಸಮೇತ ಇಂದು ಶನಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಳದಲ್ಲಿ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು.ಪ್ರಭುದೇವ, ಅವರ ಪತ್ನಿ ಹಾಗೂ ಕುಟುಂಬವರ್ಗದವರು ಮಹಾಭಿಷೇಕ ಪೂಜೆಯನ್ನು ನೆರವೇರಿಸಿ ಮುಖ್ಯ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು.ತದನಂತರ ದೇವಳದ ಕಚೇರಿಯಲ್ಲಿ...

ಗೋವು ಉಳಿದರೇ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ ಎಂದು ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ ನ ಅಧ್ಯಕ್ಷರಾದ ಭಕ್ತಿಭೂಷನ್ ದಾಸ್ ಹೇಳಿದರು. ಗೋ ಸೇವಾ ಗತಿನಿಧಿ ಕರ್ನಾಟಕ, ರಾಧ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಇವರ ಸಹಯೋಗದೊಂದಿಗೆ ನಡೆಯುವ ನಂದಿ ರಥಯಾತ್ರೆಯ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಸ್ಥಾನದ...

ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನಲ್ಲಿ ನಡೆಯುವ ಜಾತ್ರೋತ್ಸವ ವಿಜ್ರಂಭಣೆಯಿಂದ ನಡೆಯಿತು.ಮಾ.14 ರಂದು ಮುಂಡೋಡಿ ತರವಾಡು ಮನೆಯಿಂದ ಮತ್ತು ಶ್ರೀ ರುದ್ರಚಾಮುಂಡಿ ದೈವಸ್ಥಾನದಿಂದ ದೈವದ ಭಂಡಾರ ಆಗಮನ, ಉಗ್ರಾಣ ತುಂಬಿಸುವ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಿತು. ತಳೂರು ಹಾಗೂ ಮಾಳಿಗೆಯಿಂದ ಪಲ್ಲಕ್ಕಿ ಉತ್ಸವದೊಂದಿಗೆ ದೈವಗಳ ಭಂಡಾರ ತರುವ ಕಾರ್ಯಕ್ರಮ ನಡೆಯಿತು.ಮಾ....

ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ.) ನೇತೃತ್ವದಲ್ಲಿ ನಂದಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು ಇಂದು ಗುತ್ತಿಗಾರಿಗೆ ಆಗಮಿಸಿದ್ದು ಪೂರ್ಣಕುಂಭದೊಂದಿಗೆ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು. ಸಂಜೆ ಸುಳ್ಯಕ್ಕೆ ಆಗಮಿಸುವ ನಂದಿ ರಥಯಾತ್ರೆ ಗೆ ಜ್ಯೋತಿ ಸರ್ಕಲ್ ನಲ್ಲಿ ಸ್ವಾಗತ...