- Monday
- April 28th, 2025

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ನೂತನವಾಗಿ ರಚಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸದಸ್ಯರಾಗಿ ಮಹೇಶ್ ಬೆಳ್ಳಾರ್ಕರ್ ಇವರು ನಾಮನಿರ್ದೇಶನಗೊಂಡಿರುತ್ತಾರೆ. ದ. ಕ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಈ ಸಮಿತಿಯಲ್ಲಿ ಜಿಲ್ಲೆಯ ಒಟ್ಟು ಐವರು ಸದಸ್ಯರುಗಳಿದ್ದಾರೆ. ಈ ನಿಗಮದ ಮೂಲಕ ಕರ್ನಾಟಕ ಸರಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ...

ಎಂಎಸ್‌ಡಬ್ಲೂ ಪದವಿಯಲ್ಲಿ 1ನೇ ಬ್ಯಾಂಕ್ ಪಡೆಯುವ ಮೂಲಕ ಪಂಜದ ಆಯಿಶತುಲ್ ಜಾಪ್ಟರವರು ಊರಿಗೆ ಕೀರ್ತಿ ತಂದಿದ್ದಾರೆ. ಕೊಣಾಜೆಯ ಮಂಗಳೂರು ಯೂನಿವರ್ಸಿಟಿಯ ವಿದ್ಯಾರ್ಥಿನಿಯಾಗಿರುವ ಇವರು 2023-2024ನೇ ಸಾಲಿನಲ್ಲಿ ನಡೆದ ಎಂಎಸ್‌ಡಬ್ಲೂ ಪದವಿ ಪರೀಕ್ಷೆಯಲ್ಲಿ ಮೊದಲ ಬ್ಯಾಂಕ್ ಪಡೆದಿದ್ದಾರೆ. ಇವರು ಪಂಜ ಕಾಲೇಜು ಬಳಿಯ ನಿವಾಸಿ ಅಬ್ದುಲ್ ಕರೀಂ ಮತ್ತು ಜಮೀಲಾ ದಂಪತಿಗಳ ಪುತ್ರಿ.

ಸುಳ್ಯದ ಯುವ ಸಂಗೀತ ನಿರ್ದೆಶಕ ಮಯೂರ ಅಂಬೆಕಲ್ಲು ಸಾರಥ್ಯದಲ್ಲಿ ಮೂಡಿಬಂದ "ಭಾವ ತೀರ ಯಾನ" ಚಲನಚಿತ್ರ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದ್ದು ನಾಲ್ಕನೇ ವಾರದಲ್ಲಿ ಮುಂದುವರೆಯುತ್ತಿದೆ. ಮಾ.15 ಶನಿವಾರದಂದು ಮಧ್ಯಾಹ್ನ 1.45 ಕ್ಕೆ ಹಾಗೂ ಮಾ.16 ಆದಿತ್ಯವಾರದಂದು ಮಧ್ಯಾಹ್ನ 2-30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book...

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಅರ್ಭಟ ಜೋರಾಗಿದೆ, ಬಾಹ್ಯ ವಾತಾವರಣದ ಉಷ್ಣತೆ 42 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗಿದೆ. ಇಂತಹ ಬಿಸಿಲಿನ ಹೊಡೆತಕ್ಕೆ ನಮ್ಮ ದೇಹ ಬಳಲಿ ಬೆಂಡಾಗಿ ಹೀಟ್ ಸ್ಟ್ರೋಕ್ಗೆ ತುತ್ತಾಗುತ್ತದೆ. ಈ ವಿಪರೀತ ಬಿಸಿಲಿನ ಕಾರಣದಿಂದ ದೇಹಕ್ಕೆ ಉಂಟಾಗುವ ಆಘಾತವನ್ನು ಸನ್‌ಸ್ಟ್ರೋಕ್ ಅಥವಾ ಶಾಖಾಘಾತ ಎಂದೂ ಕರೆಯುತ್ತಾರೆ.ನಮ್ಮ ದೇಹದಲ್ಲಿ ನಿರಂತರವಾಗಿ ಚಯಾಪಚಯ ಜೈವಿಕ ಕ್ರಿಯೆ ನಿರಂತರವಾಗಿ...