
ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33ಕೆ.ವಿ ವಿದ್ಯುತ್ ಮಾರ್ಗದಲ್ಲಿ ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಹಿಂದೆ ಹೊಸ ವಿದ್ಯುತ್ ಮಾರ್ಗ ಎಳೆಯುವ ಸಂದರ್ಭದಲ್ಲಿ ಹಳೆಯ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಡುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದರೂ, ಹಳೆಯ ವಿದ್ಯುತ್ ಮಾರ್ಗವನ್ನು ಯಾವುದೇ ನಿರ್ವಹಣೆ ಮಾಡದೇ ಇದ್ದುದರಿಂದ ಬದಲಿ ಮಾರ್ಗವಾಗಿ ಹಳೆಯ ವಿದ್ಯುತ್ ಲೈನ್ ಅನ್ನು ಬಳಸಲು ಸಾಧ್ಯವಿಲ್ಲದಂತಾಗಿದೆ.. ಸುಳ್ಯಕ್ಕೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಎರಡೂ ಮಾರ್ಗಗಳನ್ನು ಸುಸ್ಥಿತಿಯಲ್ಲಿ ಇಡುವುದು ಅತ್ಯವಶ್ಯವಾಗಿರುವುದರಿಂದ ಈ ಕೂಡಲೇ ಹಳೆಯ ವಿದ್ಯುತ್ ಮಾರ್ಗವನ್ನು ದುರಸ್ತಿ ಮಾಡಿ ಸುಸ್ಥಿತಿಯಲ್ಲಿ ಇಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಳ್ಯ ಬಿಜೆಪಿ ಮನವಿಯಲ್ಲಿ ಆಗ್ರಹಿಸಿದೆ. .
ಸುಳ್ಯದಲ್ಲಿ ಈಗಾಗಲೇ ಅನಿಯಮಿತ ಲೋಡ್ ಶೆಡ್ಡಿಂಗ್ ಕಾರಣದಿಂದ, ಕೃಷಿ ಹಾಗೂ ಕುಡಿಯುವ ನೀರಿನ ಸರಬರಾಜಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಿ ನಿಯಮಿತ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿದೆ.
ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ವಿನಯ ಕುಮಾರ್ ಕಂದಡ್ಕ, ಸುಬೋದ್ ಶೆಟ್ಟಿ ಮೇನಾಲ,ವಿಕ್ರಂ ಅಡ್ಪಂಗಾಯ, ಹೇಮಂತ್ ಕಂದಡ್ಕ, ಚಂದ್ರಶೇಖರ ಕೇರ್ಪಳ ನೇತೃತ್ವದ ನಿಯೋಗ ಮೆಸ್ಕಾಂಗೆ ಮನವಿ ಸಲ್ಲಿಸಿದೆ.
