Ad Widget

ಮಾ.14 ಮತ್ತು 15 ರಂದು ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವ – ಕಾರಣಿಕದ ಪುರುಷ ದೈವ ಹಾಗೂ ರಾಜ್ಯದೈವದ ನೇಮ

ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನಲ್ಲಿ ನಡೆಯುವ ಜಾತ್ರೋತ್ಸವದ ಅಂಗವಾಗಿ ಫೆ.10 ರಂದು ಕಂಚು ಕಲ್ಲಿಗೆ ತೆಂಗಿನಕಾಯಿ ಹೊಡೆಯುವ ಕಾರ್ಯಕ್ರಮ, ಮಾ.02 ರಂದು ಬದಿ ಬಾಗಿಲು ತೆಗೆಯುವ ಕಾರ್ಯಕ್ರಮ, ಮಾ 09 ರಂದು ನಾಗ ತಂಬಿಲ, ಪ್ರತಿಷ್ಠಾ ದಿನಾಚರಣೆ ನಡೆದಿದ್ದು ಮಾ.14 ಮತ್ತು 15 ರಂದು ದೈವಗಳ ನೇಮೋತ್ಸವ ನಡೆಯಲಿದೆ. ಹರ್ಷಕುಮಾರ್ ಮುಂಡೋಡಿ ಮತ್ತು ಮನೆಯವರಿಂದ ನೂತನ ಪಲ್ಲಕ್ಕಿ ಸಮರ್ಪಣೆಯಾಗಿದ್ದು ಈ ಬಾರಿಯ ಜಾತ್ರೋತ್ಸವಕ್ಕೆ ಮೆರುಗು ಹೆಚ್ಚಿಸಿದೆ.

. . . . . . . . .

ಮಾ.14 ಶುಕ್ರವಾರದಂದು ಬೆಳಿಗ್ಗೆ ಗಂಟೆ 10.00 ಕ್ಕೆ ಮುಂಡೋಡಿ ತರವಾಡು ಮನೆಯಿಂದ ಮತ್ತು ಶ್ರೀ ರುದ್ರಚಾಮುಂಡಿ ದೈವಸ್ಥಾನದಿಂದ ದೈವದ ಭಂಡಾರ ಬರಲಿದೆ. ರಾತ್ರಿ ಗಂಟೆ 9.00ಕ್ಕೆ ಉಗ್ರಾಣ ತುಂಬಿಸುವ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9.00ಕ್ಕೆ ತಳೂರು ಹಾಗೂ ಮಾಳಿಗೆಯಿಂದ ಪಲ್ಲಕ್ಕಿ ಉತ್ಸವದೊಂದಿಗೆ ದೈವಗಳ ಭಂಡಾರ ಬರುವ ಕಾರ್ಯಕ್ರಮ ನಡೆಯಲಿದೆ.
ಮಾ. 15 ಶನಿವಾರದಂದು ಪ್ರಾತಃಕಾಲ 2.00ಕ್ಕೆ ಶ್ರೀ ರಾಜ್ಯದೈವದ ನೇಮ, ಬೆಳಿಗ್ಗೆ ಗಂಟೆ 9.00 ಕ್ಕೆ ಶ್ರೀ ರುದ್ರಚಾಮುಂಡಿ ದೈವದ ನೇಮ, ಬೆಳಿಗ್ಗೆ ಗಂಟೆ 11.30ಕ್ಕೆ ಶ್ರೀ ಪುರುಷ ದೈವದ ನೇಮ , ಮಧ್ಯಾಹ್ನ ಅನ್ನ ಸಂತರ್ಪಣೆ, ಮಧ್ಯಾಹ್ನ ಗಂಟೆ 2.00ಕ್ಕೆ ಶ್ರೀ ಪಂಜುರ್ಲಿ ದೈವದ ನೇಮ ನಡೆದು ಸಂಜೆ 4.00 ಗಂಟೆಗೆ ಧ್ವಜವರೋಹಣದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.

. . . . . . .

ಸಾಂಸ್ಕೃತಿಕ ಕಾರ್ಯಕ್ರಮ
ಮಾ. 14 ಶುಕ್ರವಾರದಂದು ಸಾಯಂಕಾಲ ಗಂಟೆ 7-00ರಿಂದ ಸ್ಥಳೀಯ ಅಂಗನವಾಡಿ, ಶಾಲಾ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ರಾತ್ರಿ ಗಂಟೆ 10-00ರಿಂದ ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ಇದರ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಮೂಡಿಬರಲಿದೆ. ರಾತ್ರಿ ಗಂಟೆ 12-00ರಿಂದ ಗಾನ ಕೋಗಿಲೆ ರಚನಾ ಚಿದ್ಗಲ್ಲು ಇವರ ಸುಮಧುರ ಕಂಠಸಿರಿಯ ಭಾಗವತಿಗೆಯಲ್ಲಿ “ಯಕ್ಷತರಂಗ” ಪ್ರಸ್ತುತ ಪಡಿಸುವ”ಶ್ರೀ ಕೃಷ್ಣ ಲೀಲಾಮೃತ” ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading