Ad Widget

ಅಂತಾರಾಜ್ಯ ಸಂಪರ್ಕಿಸುವ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸೇತುವೆ – ಈ ಬಗ್ಗೆ ಜನಪ್ರತಿನಿಧಿಗಳು ಏನು ಹೇಳ್ತಾರೆ?

ಅಂತಾರಾಜ್ಯ ಸಂಪರ್ಕಿಸುವ ಸುಳ್ಯ ಕೋಲ್ಚಾರು ಬಂದ್ಯಡ್ಕ ರಸ್ತೆಯಲ್ಲಿ ಪಯಸ್ವಿನಿ ನದಿಗೆ ನಾಗಪಟ್ಟಣದಲ್ಲಿ ನಿರ್ಮಿಸಲಾದ ಸೇತುವೆ ಹಲವು ಕಡೆ ಶಿಥಿಲಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಸೇತುವೆಯ ಮೇಲ್ಭಾಗದ ಅಲ್ಲಲ್ಲಿ ಕಾಂಕ್ರೀಟ್ ಎದ್ದು ಹೋಗಿದ್ದು ತಳಭಾಗ ಕಾಣಿಸುತ್ತಿದೆ. ಪಾದಾಚಾರಿಗಳು ಎಚ್ಚರ ತಪ್ಪಿದರೇ ಕಾಲು ಮುರಿದುಕೊಳ್ಳುವ ಹಂತ ತಲುಪಿದೆ. ಸೇತುವೆಯ ಮೇಲೆ ನಿಂತಾಗ ಅಟೋ ರಿಕ್ಷಾ ಸಂಚರಿಸಿದರೂ ಘನ ವಾಹನ ಸಂಚರಿಸಿಂತ...

ಆನೆಗುಂಡಿಯಲ್ಲಿ ಮರ ಬಿದ್ದು ವಿದ್ಯುತ್ ಕಂಬ ಬ್ರೇಕ್ ಡೌನ್ – ವಿದ್ಯುತ್ ವಿಳಂಬ ಸಾಧ್ಯತೆ

ಇಂದು ಸುರಿದ ಪ್ರಥಮ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿಯಲ್ಲಿ  33/11 ಕೆ.ವಿ‌. ಲೈನ್ ಗೆ ಮರ ಬಿದ್ದ ಕಾರಣ ವಿದ್ಯುತ್ ಕಂಬ ಮುರಿದಿರುತ್ತದೆ. ಈ ಹಿನ್ನೆಲೆಯಲ್ಲಿ ಸುಳ್ಯಕ್ಕೆ ವಿದ್ಯುತ್ ಸರಬರಾಜು ವಿಳಂಬವಾಗಬಹುದೆಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ
Ad Widget

ಒಡಿಯೂರು ಗ್ರಾಮ ವಿಕಾಸ ಯೋಜನೆಯ ಮಂಡೆಕೋಲು ಘಟ ಸಮಿತಿ ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ಸತ್ಯದತ್ತ ವೃತ ಪೂಜೆ – ಒಡಿಯೂರು ಗುರುದೇವಾನಂದ ಸ್ವಾಮೀಜಿಯವರಿಂದ ಆಶೀರ್ವಚನ

ಒಡಿಯೂರು ಶ್ರೀ ಚಾರಿಟೇಬಲ್‌ ಟ್ರಸ್ಟ್, ಒಡಿಯೂರು ಗುರುದೇವಾದತ್ತ ಸಂಸ್ಥಾನ, ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮಂಡೆಕೋಲು ಘಟಸಮಿತಿ ಇದರ ಆಶ್ರಯದಲ್ಲಿ ಮಂಡೆಕೋಲು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಸಮೂಹಿಕ ಸತ್ಯದತ್ತ ವ್ರತ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ ಮಾ.12 ರಂದು ನಡೆಯಿತು. ಒಡಿಯೂರು ಗುರುದೇವಾನಂದ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ...

ಬೆಂಗಳೂರು : ಗಾಯಕ ವಿಜಯಕುಮಾರ್ ಅವರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿ ಪ್ರದಾನ

ಸ್ವರ ಸಂಗಮ ಕಲಾವೃಂದ (ರಿ) ಅಕ್ಕಮಹಾದೇವಿ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜನಗರ ಬೆಂಗಳೂರು ಇಲ್ಲಿ ನಡೆದ ಸಂಗೀತ ಸಾಹಿತ್ಯ ಸಮಾಜಸೇವೆ ಇನ್ನಿತರ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರದ , ಹಾಗೂ ಕಲಾವಿದ ಶಶಿಧರ ಕೋಟೆ ನಟರಾದ ಅಡಿಗೋಡಿ ಶ್ರೀನಿವಾಸ, ಶ್ರೀಮತಿ ಭಾಗ್ಯಶ್ರೀ ಹಾಗೂ ಸಂಚಾಲಕರಾದ...

ಅರಂತೋಡು: ಅರಣ್ಯಕ್ಕೆ ಬೆಂಕಿ – ವರುಣನ ಕೃಪೆ ಹಾಗೂ ಸ್ಥಳೀಯರ ಸಹಕಾರದಿಂದ ನಂದಿದ ಬೆಂಕಿ

ಅರಂತೋಡು ಗ್ರಾಮದ ಕಲ್ಲುಗುಡ್ಡೆ, ಚೀಮಾಡು ಬಳಿ ಅರಣ್ಯಕ್ಕೆ ಬಿದ್ದ ಬೆಂಕಿಯನ್ನು ಊರವರು ಸಕಾಲದಲ್ಲಿ ಆಗಮಿಸಿ ಬೆಂಕಿ ನಂದಿಸಿದರು. ವರುಣ ದೇವರ ಕೃಪೆಯಿಂದ ಸಕಾಲ ಮಳೆಬಂದು ಸಂಪೂರ್ಣ ಬೆಂಕಿ ನಂದಿಹೋಯಿತು.

ಸುಳ್ಯದ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರ ಸಮಾರೋಪ

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ ನಾರ್ಕೋಡು ಇಲ್ಲಿ ಮಾರ್ಚ್ ೦8ರಿಂದ 1೦ರವರೆಗೆ ನಡೆದಿದ್ದು, ಇದರ ಸಮಾರೋಪ ಸಮಾರಂಭವು ಮಾ-1೦ರಂದು ಶಾಲಾ ರಂಗಮಂದಿರದಲ್ಲಿ ನಡೆಯಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್...

ಸುಳ್ಯದಲ್ಲಿ ತಂಪೆರೆದ ಮಳೆ

https://youtu.be/brDpSjsSTqg?si=IlprEAySjK_ioyuA ಸುಳ್ಯದಲ್ಲಿ ಇಂದು ಸಂಜೆ 3.30 ರ ವೇಳೆಗೆ ಮಳೆ ಸುರಿದಿದ್ದು ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ಪೇಟೆಯಲ್ಲಿ ತಂಪೆರೆದಿದೆ. ಅರಂತೋಡು ಭಾಗದಲ್ಲಿ ಹೆಚ್ಚಿನ ಮಳೆ ಸುರಿದಿದೆ.

ಆರ್ಥಿಕ ವರ್ಷ ಮುಕ್ತಾಯದ ಹಿನ್ನೆಲೆ – ಬಾಕಿ ಬಿಲ್ ಪಾವತಿಗೆ ಮೆಸ್ಕಾಂ ಸೂಚನೆ

ಆರ್ಥಿಕ ವರ್ಷ ಮಕ್ತಾಯದ (ಮಾರ್ಚ್) ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಸ್ಥಾವರಗಳ ಬಾಕಿ ಇರುವ ಪೂರ್ಣ ಪ್ರಮಾಣದ ವಿದ್ಯುತ್ ಬಿಲ್ಲನ್ನು ಪಾವತಿ ಮಾಡುವಂತೆ ಮನವಿ ಮಾಡಿದ್ದು, ವಿದ್ಯುತ್ ಬಿಲ್ ಬಾಕಿ ಇರಿಸಿದ ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಚಿಲ್ತಡ್ಕ ಜತ್ತಪ್ಪ ಮಾಸ್ಟರ್ ರಿಗೆ ತಾರಸಿ ಕೃಷಿಕ ಡಾ| ಕೃಷ್ಣಪ್ಪಗೌಡ ಪಡ್ಡಂಬೈಲ್ ಅವರಿಂದ ಸನ್ಮಾನ

ಗುತ್ತಿಗಾ‌ರು ಗ್ರಾಮದ ಚಿತ್ತಡ್ಕ ಜತ್ತಪ್ಪ ಮಾಸ್ಟ‌ರ್ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮವು ಇತ್ತೀಚೆಗೆ ಅವರ ಚಿಲ್ತಡ್ಕ ನಿವಾಸದಲ್ಲಿ ನಡೆಯಿತು. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ತೊಡಗಿಸಿಕೊಂಡು ಬಂದಿರುವ ಹಿರಿಯ ನಾಗರಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಂಗಳೂರಿನ ಮರೋಳಿ ಬಳಿಯ ನಿವಾಸಿ ತಾರಸಿ ಕೃಷಿಕ ಡಾ| ಕೃಷ್ಣಪ್ಪಗೌಡ ಪಡ್ಡಂಬೈಲ್ ರವರು ಕಳೆದ ಹಲವಾರು ವರ್ಷಗಳಿಂದ ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಈ...

ಮಾ.14 ರಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ನೂತನ ಸಮಿತಿಗೆ ಹಸ್ತಾಂತರ

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತವನ್ನು ನೂತನ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಮಾ.14 ರಂದು ನಡೆಯಲಿದೆ. ಸರಕಾರ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಿದ್ದು ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲ ಪದ್ಮನಾಭ ಪರಮಲೆ ಆಯ್ಕೆಗೊಂಡಿದ್ದು ಅವರಿಗೆ ಅಧಿಕಾರ ಹಸ್ತಾಂತರ ನಡೆಯಲಿದೆ. ಹಾಗೂ ಅಂದೇ ವಾರ್ಷಿಕ ಜಾತ್ರೋತ್ಸವ ಸಮಿತಿಯ ರಚನೆಯ ಬಗ್ಗೆ ವಿಶೇಷ ಸಮಿತಿ ಸಭೆಯನ್ನು ಕರೆಯಲಾಗಿದ್ದು...
Loading posts...

All posts loaded

No more posts

error: Content is protected !!