
ಹಳೆಗೇಟು ಪೆಟ್ರೋಲ್ ಪಂಪ್ ಬಳಿ ಕಾರೊಂದಕ್ಕೆ ಸ್ಕೂಟಿ ಢಿಕ್ಕಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಸುಳ್ಯದಿಂದ ಹರಿಹರಪಲ್ಲತ್ತಡ್ಕದ ಕಡೆಗೆ ಚಲಿಸುತ್ತಿದ್ದ ಕಾರಿಗೆ (KA21 Z 4868) ಪೈಚಾರು ಕಡೆಯಿಂದ ಬರುತ್ತಿದ್ದ ಸ್ಕೂಟಿ (KA21 EA 6591) ಡಿಕ್ಕಿಯಾಯಿತು. ಢಿಕ್ಕಿಯಾದ ರಭಸಕ್ಕೆ ಸವಾರ ಕಾರಿನ ಮೇಲೆ ಬಿದ್ದಿದ್ದು ಅಪಾಯದಿಂದ ಪಾರಾಗಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಯಿತೆಂದು ತಿಳಿದುಬಂದಿದೆ.
