Ad Widget

ಕೊರಗಜ್ಜನ ತುಳು ಭಕ್ತಿಗೀತೆ “ಕೇಪುಳ ಪ್ರಿಯೆ” ಮೊಗಪ್ಪೆ ಸಾನಿಧ್ಯದಲ್ಲಿ ಬಿಡುಗಡೆ

ಮೊಗಪ್ಪೆ: ತುಳುನಾಡಿನ ಜನಪ್ರಿಯ ಭಕ್ತಿ ಪರಂಪರೆಯಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿರುವ *ಕೇಪುಳ ಪ್ರಿಯೆ* ಕೊರಗಜ್ಜನ ತುಳು ಭಕ್ತಿಗೀತೆ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಬಿಡುಗಡೆಯಾಯಿತು.

. . . . . . . . .

ಈ ಭಕ್ತಿಗೀತೆಯನ್ನು ಆರ್.ಪಿ. ಕ್ರಿಯೇಷನ್ ಗೌರವಪೂರ್ವಕವಾಗಿ ಅರ್ಪಿಸಿದ್ದು, ನಿರ್ದೇಶಕ ಹಾಗೂ ಗಾಯಕ ರವಿ ಪಾಂಬಾರ್ ಅವರ ಮಾರ್ಗದರ್ಶನದಲ್ಲಿ ಈ ಗೀತೆ ಮೂಡಿಬಂದಿದೆ. ಪ್ರಖ್ಯಾತ ಗಾಯಕಿ ಕುಸುಮ ವೈ.ಎಸ್. ಅವರ ಸಹಗಾಯನ, ಯುವ ಸಾಹಿತಿ ಪ್ರಿಯಾ ಸುಳ್ಯ ಅವರ ಸಾಹಿತ್ಯ ಹಾಗೂ ರೋಹಿತ್ ಕುರಿಕ್ಕಾರ್ ಅವರ ಹಿನ್ನಲೆ ಧ್ವನಿಯು ಈ ಗೀತೆಗೆ ವಿಶೇಷ ಭಾವನಾತ್ಮಕ ಮೂಡಿವೆ.

ಈ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ 2025 ಮಾರ್ಚ್ 6 ರಂದು ಮಂಗಳವಾರ, ಮೊಗಪ್ಪೆ ಕೊರಗಜ್ಜ ಸಾನಿಧ್ಯದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಶುಭ ಸಂದರ್ಭದಲ್ಲಿ ಕಾರಣಿಕ ಕೊರಗತನಿಯ ಸಾನಿಧ್ಯದ ಧರ್ಮದರ್ಶಿಗಳಾದ ಶಾಂತಪ್ಪ ಪೂಜಾರಿ ಮೊಗಪ್ಪೆ ಅವರ ಅಮೃತ ಹಸ್ತದಿಂದ ಈ ಭಕ್ತಿಗೀತೆ ಬಿಡುಗಡೆಯಾಯಿತು.

ಈ ಕಾರ್ಯಕ್ರಮ ಯಶಸ್ವಿಯಾಗಿ ಬಿಡುಗಡೆಯಾಗಲು ಕಾರಣರಾದ ಉಮೇಶ್ ಕುಲಾಲ್ ಮೊಗಪ್ಪೆ, ಅಶೋಕ್ ಪೂಜಾರಿ ಮಾಣಿಮಜಲು, ಪ್ರವೀಣ್ ಪೂಜಾರಿ ಮಾಣಿಮಜಲು, ತನುಷ್ ಹಾಗೂ ತಂತ್ರಜ್ಞರು ಮತ್ತು ಮೊಗಪ್ಪೆ ಕೊರಗಜ್ಜ ಸಾನಿಧ್ಯದ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!