
ಸಂದರ್ಶನ ಕೌಶಲ್ಯವಿದ್ದಾಗ ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಡಾ.ರಾಜೇಶ್ ಬೆಜ್ಜಂಗಳ ಹೇಳಿದರು. ಅವರು ಜೇಸಿಐ ಬೆಳ್ಳಾರೆಯ ಆಶ್ರಯದಲ್ಲಿ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಶಿಕ್ಷಕಿಯರಿಗೆ ನಡೆದ ಸಂದರ್ಶನ ಕೌಶಲ್ಯ ಕಾರ್ಯಾಗರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಭವಿಷ್ಯದ ಶಿಕ್ಷಕಿಯರಿಗೆ ಸಂದರ್ಶನ ಎದುರಿಸಲು ಅಗತ್ಯವಿರುವ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಾಗಾರವನ್ನು ವಲಯ ತರಬೇತುದಾರ, ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಲಿಂಗಪ್ಪ ಬೆಳ್ಳಾರೆ ಉದ್ಘಾಟಿಸಿ ಶುಭಹಾರೈಸಿದರು.
ಬೆಳ್ಳಾರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ಜಗದೀಶ್ ರೈ ಪೆರುವಾಜೆ ಉಪಸ್ಥಿರಿದ್ದರು.ಉಪನ್ಯಾಸಕ ಯೋಗೀಶ್ ತಳೂರು ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ವಂದಿಸಿದರು. ವಿದ್ಯಾರ್ಥಿ ಶಿಕ್ಷಕಿಯರುಗಳಾದ ಜನಿತಾ ಮತ್ತು ಸುನೀತಾ ಸಹಕರಿಸಿದರು.
