
ನೂತನ ಅಧ್ಯಕ್ಷರಾಗಿ ಮಧು ಗೋಳ್ಯಾಡಿ
ಕಾರ್ಯದರ್ಶಿಯಾಗಿ ರಾಕೇಶ್ ಬೆಂಡೋಡಿ
ಕೋಶಾಧಿಕಾರಿಯಾಗಿ ಭರತ್ ಕೇಮಟಿ
ಹರಿಹರ ಪಳ್ಳತ್ತಡ್ಕದ ಶಿವಹರಿ ಆಟೋರಿಕ್ಷಾ ಚಾಲಕ-ಮ್ಹಾಲಕರ ಸಂಘದ ವಾರ್ಷಿಕ ಮಹಾಸಭೆಯು ಮಾ.05 ರಂದು ದಯಾನಂದ ಪರಮಲೆ ರವರ ಅಧ್ಯಕ್ಷತೆಯಲ್ಲಿ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.
ತಾಲೂಕು ಆಟೋರಿಕ್ಷಾ ಚಾಲಕ-ಮ್ಹಾಲಕರ ಸಂಘದ ಸ್ಥಾಪಕಾಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಅಧ್ಯಕ್ಷರಾದ ಪ್ರಕಾಶ್, ಕಾರ್ಯದರ್ಶಿ ನಾರಾಯಣ.ಎಮ್.ಎಸ್, ಕೋಶಾಧಿಕಾರಿ ರವಿ ಜಾಲ್ಸೂರು ಹಾಗೂ ಶಿವಹರಿ ಆಟೋರಿಕ್ಷಾ ಚಾಲಕ-ಮ್ಹಾಲಕರ ಸಂಘದ ಕೋಶಾಧಿಕಾರಿ ಲೋಕೇಶ್ ರಾಗಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ನೂತನ ಅಧ್ಯಕ್ಷರಾಗಿ ಮಧು ಗೋಳ್ಯಾಡಿ, ಕಾರ್ಯದರ್ಶಿಯಾಗಿ ರಾಕೇಶ್ ಬೆಂಡೋಡಿ, ಕೋಶಾಧಿಕಾರಿಯಾಗಿ ಭರತ್ ಕೇಮಟಿ ಇವರುಗಳನ್ನು ಆಯ್ಕೆ ಮಾಡಲಾಯಿತು.(ವರದಿ : ಉಲ್ಲಾಸ್ ಕಜ್ಜೋಡಿ)
