
ರಾಜ್ಯದ ನಂಬರ್ ಒನ್ ದೇವಸ್ಥಾನವಾಗಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಮುಖ್ಯ ರಸ್ತೆಯಲ್ಲೊಂದು ಮರಣ ಬಾವಿಯೊಂದು ಅಪಾಯ ಆಹ್ವಾನಿಸುತ್ತಿದೆ. ಕುಮಾಧಾರದಿಂದ ದೇವಸ್ಥಾನಕ್ಕೆ ಆಗಮಿಸುವ ರಸ್ತೆಯಲ್ಲಿ ಡಿಗ್ರಿ ಕಾಲೇಜು ಎದುರು ಒಳಚರಂಡಿಯ ಮ್ಯಾನ್ ಹೋಲ್ ರಸ್ತೆ ಮಧ್ಯೆಯೇ ಇದ್ದು ಅಪಾಯ ಆಹ್ವಾನಿಸುತ್ತಿದೆ. ಕಬ್ಬಿಣದ ಸರಳನ್ನು ಇಟ್ಟು ಒಳಚರಂಡಿಗೆ ಮುಚ್ಚಳವನ್ನು ಹಾಕಲಾಗಿದ್ದು ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ದುರಂತ ಸಂಭವಿಸುವ ಮೊದಲು ಸಂಬಂಧಪಟ್ಟವರು ಶೀಘ ಸರಿಪಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
