
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೋವರ್ ರೇಂಜರ್ಸ್ ಘಟಕ, ಯುವ ರೆಡ್ ಕ್ರಾಸ್ ಘಟಕ, ಪ್ರಾಕ್ತನ ವಿದ್ಯಾರ್ಥಿ ಪರಿಷತ್, ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಪುತ್ತೂರು ಜಂಟಿ ಆಶ್ರಯದಲ್ಲಿ 4.03.2025 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ರೋಟರಿ ಕ್ಯಾಂಪ್ ಬ್ಲಡ್ ಸೆಂಟರ್ ಪುತ್ತೂರಿನ ವೈದ್ಯಾಧಿಕಾರಿಗಳಾದ, ಡಾ .ಕೆ ಸೀತಾರಾಮ ಭಟ್ ಶಿಬಿರವನ್ನು ಉದ್ಘಾಟಿಸಿದರು. ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲರಾದ, ಡಾ. ದಿನೇಶ್ ಕೆ. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ರೋವರ್ಸ್ ಸ್ಕೌಟ್ ಲೀಡರ್ ಮನೋಹರ ಸ್ವಾಗತಿಸಿ, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಯಾದ, ಸೃಜನ್ ಮುಂಡೋಡಿ ಧನ್ಯವಾದ ಸಮರ್ಪಿಸಿ, ವಿದ್ಯಾರ್ಥಿನಿ ದೀಕ್ಷಾ ತೃತೀಯ ಬಿಎ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ, ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಗಣೇಶ್ ಪ್ರಸಾದ್ ನಾಯರ್, ಮಹಾವಿದ್ಯಾಲಯದ ಐ ಕ್ಯೂ ಎ ಸಿ ಸಂಯೋಜಕಿಯದ ಶ್ರೀಮತಿ ಲತಾ ಬಿ. ಟಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಆರತಿ ಕೆ ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 50 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮಕ್ಕೆ ವಿವಿಧ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಾದ, ಶ್ರೀಮತಿ ಪ್ರಮೀಳಾ, ಶ್ರೀ ರಾಮಪ್ರಸಾದ್, ಶ್ರೀಮತಿ ಅಶ್ವಿನಿ,ಶ್ರೀಮತಿ ವನಿತಾ, ಶ್ರೀಮತಿ ಸ್ವಾತಿ ಸಹಕರಿಸಿದರು. ಸುಬ್ರಹ್ಮಣ್ಯದ ರೋಟರಿ ಕ್ಲಬ್ ಅಧ್ಯಕ್ಷರಾದ ಚಂದ್ರಶೇಖರ್ ನಾಯರ್ ರಕ್ತದಾನ ಶಿಬಿರಕ್ಕೆ ಹಣ್ಣನ್ನು ನೀಡಿ ಸಹಕರಿಸಿದರು.
