ಬೆಳ್ಳಾರೆ : ಗ್ರಾ.ಪಂ. ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಮಹಿಳಾ ಓದುಗರೊಂದಿಗೆ ಸಂವಾದ – ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅಪಾರ:ಸಾಹಿತಿ ಶ್ರೀಮತಿ ಅಶ್ವಿನಿ ಕೋಡಿಬೈಲು

ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಆಶ್ರಯದಲ್ಲಿ ಸಂಸ್ಥೆಯ ದಶ ಸಂಭ್ರಮ ಅಂಗವಾಗಿ ನಡೆದ ದಶ ಕಾರ್ಯಕ್ರಮಗಳು, ಮಹಿಳಾ ಓದುಗರೊಂದಿಗೆ ಒಂದು ದಿನ, ಮಹಿಳಾ ಸಾಹಿತಿಗಳೊಂದಿಗೆ ಸಂವಾದ ಮತ್ತು ಸುಳ್ಯ ತಾಲೂಕಿನ ಮಹಿಳಾ ಸಾಹಿತಿಗಳ ಪರಿಚಯ ಕಾರ್ಯಕ್ರಮ ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಮಾ.3ರಂದು ನಡೆಯಿತು. ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು...

ಕಂದ್ರಪ್ಪಾಡಿ ರಾಜ್ಯದೈವ ಪುರುಷ ದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಳಿಕಾಪ್ರಸಾದ್ ಮುಂಡೋಡಿ

ಕಂದ್ರಪ್ಪಾಡಿ ರಾಜ್ಯದೈವ ಪುರುಷ ದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಳಿಕಾಪ್ರಸಾದ್ ಮುಂಡೋಡಿ ಆಯ್ಕೆಯಾಗಿದ್ದಾರೆ. ಸೋಮಶೇಖರ ಕೇವಳ, ಶ್ರೀಮತಿ ಗೀತಾ ತಿಮ್ಮಪ್ಪ ಕಡ್ಯ, ಜಯರಾಮ ಕಡ್ಲಾರ್, ಶ್ರೀಮತಿ ಜಾನಕಿ ಚಿದಾನಂದ ಪೇರಳಕಜೆ, ಯಂ. ಆರ್. ಪುರುಷೋತ್ತಮ ಮುಂಡೋಡಿ, ಅಜಯ್ ವಾಲ್ತಾಜೆ, ಕರುಣಾಕರ ದೇವರಗುಂಡ, ಶೂರಪ್ಪ ದೇವ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದಾರೆ.
Ad Widget

ಮಡಪ್ಪಾಡಿ – ಮರ್ಕಂಜ ಮಾರ್ಗವಾಗಿ ಸುಳ್ಯಕ್ಕೆ ನೂತನ ಸರಕಾರಿ ಬಸ್ಸು ಸೇವೆ ಪ್ರಾರಂಭ

ಮಡಪ್ಪಾಡಿಯಿಂದ ಬೆಳಿಗ್ಗೆ 7.00ಗಂಟೆಗೆ ಹೊರಟು ಮರ್ಕಂಜ – ದೊಡ್ಡತೋಟ ಮಾರ್ಗವಾಗಿ ಸುಳ್ಯಕ್ಕೆ ಬಸ್ಸು ಸೇವೆ (03) ಇಂದಿನಿಂದ ಪ್ರಾರಂಭವಾಗಿದೆ. ಇದೀಗ ಮಡಪ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯವರ ಮೂಲಕ ಮಾಡಿದ ಪ್ರಯತ್ನದ ಫಲವಾಗಿ ಇದೀಗ ಬಸ್ಸು ಸೇವೆಯನ್ನು, ಕರ್ನಾಟಕ ಸಾರಿಗೆ ಇಲಾಖೆ ಆರಂಭಿಸಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಉಷಾ...

ಸಿರಿಬಾಗಿಲು ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಅವರ ಸನ್ಮಾನ ಸಮಾರಂಭ ಹಾಗೂ ಸತ್ಕಾರ ಕೂಟ.

ಸುಬ್ರಹ್ಮಣ್ಯ ಮಾ.2: ಸುಬ್ರಹ್ಮಣ್ಯ ಸಮೀಪದ ಸಿರಿಬಾಗಿಲು ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಅವರಿಗೆ ಇಂದು ಆದಿತ್ಯವಾರ ಸನ್ಮಾನ ಸಮಾರಂಭ ಹಾಗೂ ಸತ್ಕಾರ ಕೂಟ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು. ಕಾರ್ಯಕ್ರಮವನ್ನು ಕೊಂಬಾರು ಗ್ರಾಮ...

ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿಯವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಸದಸ್ಯರುಗಳಾದ ಕೇಶವ ಹೊಸೋಳಿಕೆ, ಪುರುಷೋತ್ತಮ ಬದಿಯಡ್ಕ, ಜಯಾನಂದ ಪಟ್ಟೆ, ಶಿವಪ್ರಸಾದ್ ಕಂದ್ರಪ್ಪಾಡಿ, ಸನತ್ ಮುಳುಗಾಡು, ಉಷಾ ಮಲ್ಕಜೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ಉಪಸ್ಥಿತರಿದ್ದರು.
error: Content is protected !!