
ವೈದ್ಯಕೀಯ ,ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸೇವೆ ಹಾಗೂ ಕೊಡುಗೆಗಾಗಿ ಸುಳ್ಯದ ಸ್ನೇಹ ಶಾಲೆಯಲ್ಲಿ ಡಾ ಮುರಲೀ ಮೋಹನ್ ಚೂಂತಾರು ಮತ್ತು ಡಾ ರಾಜಶ್ರೀ ಮೋಹನ್ ಅವರನ್ನು ಶಾಲು ಹೊದಿಸಿ ಫಲ ಪುಷ್ಪ ಫಲಕ ನೀಡಿ ಸನ್ಮಾನ ಮಾಡಲಾಯಿತು. ಪದ್ಮಶ್ರೀ ಶ್ರೀ ಗಿರೀಶ್ ಭಾರದ್ವಾಜ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಾ ಚಂದ್ರಶೇಖರ ದಾಮ್ಲೆ, ಡಾ ವಿದ್ಯಾಶಾಂಭವ ಪಾರೆ,ಶ್ರೀಮತಿ ಜಯಲಕ್ಷ್ಮಿ ದಾಮ್ಲೆ,ಶ್ರೀ ಅಕ್ಷರ ದಾಮ್ಲೆ,ನಿವ್ರತ್ತ ವೈದ್ಯಾಧಿಕಾರಿ ಶ್ರೀ ಡಾ ರಂಗಯ್ಯ,ಡಾ ಸುಶ್ಮಿತಾ ಮುಂತಾದವರು ಉಪಸ್ಥಿತರಿದ್ದರು.
