
ಕುಡಿಯುವ ನೀರಿನ ಯೋಜನೆಗಾಗಿ ಸುಳ್ಯ ನಗರದಲ್ಲಿ ಪೈಪ್ ಅಳವಡಿಕೆ ಕಾರ್ಯ ಭರದಿಂದ ನಡೆಯುತ್ತಿದ್ದು ಕೆಲವೆಡೆ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ.
ಕುರುಂಜಿಭಾಗ್ ನಲ್ಲಿ ಬೇರೆಡೆ ಜಾಗವಿದ್ದರೂ ರಸ್ತೆ ಮಧ್ಯದಲ್ಲಿಯೇ ಕಾಂಕ್ರಿಟ್ ಒಡೆದು ಪೈಪ್ ಹಾಕಲಾಗುತ್ತಿದೆ. ಇಲ್ಲಿ ಮೊದಲಿದ್ದ ಕುಡಿಯುವ ನೀರಿನ ಪೈಪ್ ಲೈನ್ ಗಳನ್ನು ತುಂಡರಿಸಲಾಗಿದ್ದು ಅದನ್ನು ಪುನಃ ಜೋಡಣೆ ಸಮರ್ಪಕವಾಗಿ ಮಾಡದೇ ಇರುವುದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ರಸ್ತೆ ಮಧ್ಯದಲ್ಲಿಯೇ ಪೈಪ್ ಹಾಕುವುದರಿಂದ ಮುಂದೆ ಪೈಪ್ ದುರಸ್ತಿಯ ಅನಿವಾರ್ಯತೆ ಬಂದರೇ ರಸ್ತೆಯನ್ನೇ ಪುನಃ ಅಗೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಒಂದು ಕೆಲಸಕ್ಕೆ ಇನ್ನೊಂದನ್ನು ಹಾಳು ಮಾಡುವುದು ಮಾಮೂಲಿಯಾಗಿದ್ದು ಹೇಳೊರು ಇಲ್ಲ, ಕೇಳೋರು ಇಲ್ಲದಾಗಿದೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ.
